ಹಸಿದ ಹೊಟ್ಟೆಯಲ್ಲಿ ಕಲ್ಲಂಗಡಿ ಸೇವನೆ ಒಳ್ಳೆಯದೇ, ಕೆಟ್ಟದೇ?: ತಜ್ಞರ ಸಲಹೆ ಇಲ್ಲಿದೆ..

Update: 2023-08-03 17:04 GMT

ಮುಂಜಾನೆಯೇ ನಿಮ್ಮನ್ನು ಹೈಡ್ರೇಟಿಂಗ್ ಮಾಡುವ ಮೂಲಕ ಎಲೆಕ್ಟ್ರೋಲೈಟ್ ಸಮತೋಲನ ಕಾಪಾಡಿಕೊಳ್ಳಬಹುದು ಹಾಗೂ ಇಡೀ ನಿಮ್ಮ ನಿಮ್ಮನ್ನು ಚೈತನ್ಯದಿಂದ ಇರುವಂತೆ ಮಾಡಬಹುದು. ನಿಮ್ಮ ಆಹಾರವನ್ನು ಕಲ್ಲಂಗಡಿಯೊಂದಿಗೆ ಆರಂಭಿಸುವುದು ಆರೋಗ್ಯಕರ ಆಯ್ಕೆ ಕ್ರಮಗಳಲ್ಲಿ ಒಂದು ಎಂದು ಪೌಷ್ಟಿಕಾಂಶ ತಜ್ಞರು ಅಭಿಪ್ರಾಯಪಡುತ್ತಾರೆ. ಶೇಕಡ 90ರಷ್ಟು ನೀರಿನ ಅಂಶ ಹಾಗೂ ವಿಟಮಿನ್ ಮತ್ತು ಖನಿಜಾಂಶಗಳಿಂದ ಕೂಡಿದ ಈ ಆರೋಗ್ಯಕರ ಮತ್ತು ರುಚಿಕರ ಹಣ್ಣು, ನಿಮ್ಮ ಸುಕ್ಷೇಮಕ್ಕೆ ಗಣನೀಯ ಕೊಡುಗೆ ನೀಡುತ್ತದೆ.

ಅಧಿಕ ನಾರಿನ ಅಂಶ ಮತ್ತು ಪೌಷ್ಟಿಕಾಂಶದ ಮೌಲ್ಯಗಳು ನಿಮ್ಮ ಬೆಳಗ್ಗಿನ ಉಪಾಹಾರದ ಪರಿಪೂರ್ಣ ಆಹಾರ ಎನಿಸಿಕೊಳ್ಳುತ್ತದೆ. ಆದರೆ ಪ್ರತಿಯೊಬ್ಬರೂ ಖಾಲಿ ಹೊಟ್ಟೆಯಲ್ಲಿ ಕಲ್ಲಂಗಡಿ ಸೇವಿಸಬಹುದೇ?

ಕಲ್ಲಂಗಡಿ ಹಣ್ಣು ಉತ್ತಮ ವಿಟಮಿನ್ ಹಾಗೂ ಖನಿಜಾಂಶ, ಪೊಟ್ಯಾಶಿಯಂನಂಥ ಅಂಶಗಳನ್ನು ಹೊಂದಿದ್ದು, ಹೈಡ್ರೇಶನ್‍ಗೆ ಉತ್ತಮವಾಗಿದ್ದರೂ, ಪ್ರತಿಯೊಬ್ಬರೂ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದು ಒಳ್ಳೆಯದಲ್ಲ. ಆಯಾ ವ್ಯಕ್ತಿಯ ದೇಹದ ವಿಧಾನಕ್ಕೆ ಹಾಗೂ ಹಾರ್ಮೋನ್ ಕಾರ್ಯಾಚರಣೆಯ ಆಧಾರದಲ್ಲಿ ಇದು ಪ್ರಯೋಜನಕಾರಿ ಆಗಲೂಬಹುದು ಅಥವಾ ಆಗದಿರಲೂಬಹದು.

ಉದಾಹರಣೆಗೆ ಇನ್‍ಸುಲಿನ್ ಪ್ರತಿರೋಧ ಹೊಂದಿರುವ ವ್ಯಕ್ತಿಗೆ ಬೆಳಿಗ್ಗಿನ ಉಪಾಹಾರದಲ್ಲಿ ಕಲ್ಲಂಗಡಿ ಹಣ್ಣು ಸೇರಿಸುವುದು ಉತ್ತಮ ಆಯ್ಕೆಯಲ್ಲ. ಇದು ಪ್ರಯೋಜನ ನೀಡದಿರುವುದು ಮಾತ್ರವಲ್ಲದೇ, ರೋಗಲಕ್ಷಣಗಳನ್ನು ತೀವ್ರಗೊಳಿಸಬಹುದು. ಆದರೆ ಕಡಿಮೆ ಪ್ರಮಾಣದಲ್ಲಿ ಆಗ್ಗಾಗ್ಗೆ ಇದನ್ನು ಸೇವಿಸುವುದು ಪ್ರಯೋಜನಕಾರಿ ಎನ್ನುತ್ತಾರೆ ಪೌಷ್ಟಿಕಾಂಶ ತಜ್ಞೆ ಅನುಪಮಾ ಮೆನನ್.

ಫ್ರಕ್ಟೋಸ್ ಅಸಹಿಷ್ಣುತೆ ಹೊಂದಿದ ವ್ಯಕ್ತಿಗಳಿಗೆ ಕಲ್ಲಂಗಡಿ ಹಣ್ಣು ಸೇವನೆಯು ಕೊರೆಸ್ಟಿಸೋಲ್ ಮಟ್ಟವನ್ನು ಹೆಚ್ಚಿಸಿ, ಇನ್‍ಸುಲಿನ್ ಪ್ರತಿರೋಧತೆಯನ್ನು ಏರಿಸಬಹುದು ಎಂದು ಅವರು ಎಚ್ಚರಿಸುತ್ತಾರೆ.

ಕೃಪೆ: hindustantimes.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News