ಕ್ಯಾನ್ಸರ್ ಚಿಕಿತ್ಸೆಗೆ ಅಂಶುಮಾನ್ ಗಾಯಕ್ವಾಡ್ ಗೆ 1 ಕೋಟಿ ರೂ. ಆರ್ಥಿಕ ನೆರವು ನೀಡಿದ ಬಿಸಿಸಿಐ

Update: 2024-07-14 15:25 GMT

ಅಂಶುಮಾನ್ ಗಾಯಕ್ವಾಡ್ , ಜಯ್ ಶಾ | PC : PTI 

ಹೊಸದಿಲ್ಲಿ: ಪ್ರಸ್ತುತ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿರುವ ಭಾರತದ ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ಗೆ ಬಿಸಿಸಿಐ 1 ಕೋಟಿ ರೂ. ಆರ್ಥಿಕ ನೆರವು ನೀಡಿದೆ.

ಹಿರಿಯ ಆಟಗಾರನಿಗೆ ಆರ್ಥಿಕ ನೆರವನ್ನು ಒದಗಿಸಲು ತಕ್ಷಣವೇ 1 ಕೋಟಿ ರೂ. ಬಿಡುಗಡೆ ಮಾಡುವಂತೆ ಅಪೆಕ್ಸ್ ಕೌನ್ಸಿಲ್ ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನಿರ್ದೇಶನ ನೀಡಿದ್ದಾರೆ.

ಆರ್ಥಿಕ ಸಹಾಯದ ಜೊತೆಗೆ ಶಾ ಅವರು ಗಾಯಕ್ವಾಡ್ ಕುಟುಂಬವನ್ನು ವೈಯಕ್ತಿಕವಾಗಿ ಭೇಟಿ ಪರಿಸ್ಥಿತಿಯನ್ನು ಅರಿತುಕೊಂಡು ಇನ್ನಷ್ಟು ಸಹಾಯ ನೀಡಲು ಬಯಸಿದ್ದಾರೆ.

ಗಾಯಕ್ವಾಡ್ ಚಿಕಿತ್ಸೆಯುದ್ದಕ್ಕೂ ಅವರ ಆರೋಗ್ಯವನ್ನು ನಿಕಟವಾಗಿ ಗಮನಿಸಲಿದ್ದೇವೆ ಹಾಗೂ ಈ ಸವಾಲಿನ ಹಂತವನ್ನು ಜಯಿಸುವ ಅವರ ಸಾಮರ್ಥ್ಯದ ಬಗ್ಗೆ ಆಶಾವಾದಿಯಾಗಿದ್ದೇವೆ ಎಂದು ಬಿಸಿಸಿಐ ತಿಳಿಸಿದೆ.

ತನ್ನ ಮಾಜಿ ಸಹೋದ್ಯೋಗಿ ಗಾಯಕ್ವಾಡ್ ಗೆ ಆರ್ಥಿಕ ಸಹಾಯ ನೀಡುವಂತೆ ಭಾರತದ ಮಾಜಿ ನಾಯಕ ಕಪಿಲ್ದೇವ್ ಇತ್ತೀಚೆಗೆ ಬಿಸಿಸಿಐಗೆ ಮನವಿ ಮಾಡಿದ್ದರು.

71ರ ವಯಸ್ಸಿನ ಗಾಯಕ್ವಾಡ್ ಆರೋಗ್ಯದ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದು, ಅವರಿಗೆ ಚಿಕಿತ್ಸೆ ನಡೆಯುತ್ತಿದೆ.

1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ಅವರು ಮಾಜಿ ಕ್ರಿಕೆಟಿಗರೊಂದಿಗೆ ಸೇರಿಕೊಂಡು ಗಾಯಕ್ವಾಡ್ ವೈದ್ಯಕೀಯ ವೆಚ್ಚಕ್ಕಾಗಿ ನಿಧಿ ಸಂಗ್ರಹಿಸಲು ಮುಂದಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News