ಮೂರನೆ ಏಕದಿನ ಪಂದ್ಯ: ಭಾರತ ವಿರುದ್ಧ ಆಸ್ಟ್ರೇಲಿಯಕ್ಕೆ 66 ರನ್ ಗೆಲುವು

Update: 2023-09-27 16:20 GMT

Photo: X\ @ICC

ರಾಜ್ ಕೋಟ್: ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ 66 ರನ್ ಗಳ ಸೋಲು ಅನುಭವಿಸಿದೆ. 353 ರನ್ ಗಳ ಕಠಿಣ ಸವಾಲು ಪಡೆದ ಭಾರತ 286 ಕ್ಕೆ ಆಲೌಟ್ ಆಯಿತು.

ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಆಸ್ಟ್ರೇಲಿಯ ಪರ ಡೇವಿಡ್ ವಾರ್ನರ್ 56, ಮಿಶೆಲ್ ಮಾರ್ಶ್ 96, ಸ್ಟೀವ್ ಸ್ಮಿತ್ 74, ಮಾರ್ನೂಸ್ ಲಾಬು ಶೇನ್ 72 ರನ್ ನೆರವಿನಿಂದ 50 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 352 ರನ್ ಗಳಿಸಿತು.

ಬೃಹತ್ ಮೊತ್ತದ ಬೆನ್ನತ್ತಿದ ಭಾರತ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 286 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಸರಣಿ ಯನ್ನು 2-1 ಅಂಕ ಗಳೊಂದಿಗೆ ತನ್ನದಾಗಿಸಿಕೊಂಡಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News