ಭಾರತದಲ್ಲಿ 200 ಟೆಸ್ಟ್ ವಿಕೆಟ್ ಪೂರೈಸಿದ ಜಡೇಜ
Update: 2024-02-17 14:50 GMT
ರಾಜ್ಕೋಟ್: ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ವಿಕೆಟನ್ನು ಉರುಳಿಸಿದ ರವೀಂದ್ರ ಜಡೇಜ ಭಾರತದಲ್ಲಿ 200 ಟೆಸ್ಟ್ ವಿಕೆಟ್ ಪಡೆದ ಭಾರತದ ಐದನೇ ಬೌಲರ್ ಎಂಬ ಕೀರ್ತಿಗೆ ಭಾಜನರಾದರು.
ಮೂರನೇ ಟೆಸ್ಟ್ ನ 3ನೇ ದಿನವಾದ ಶನಿವಾರ ಊಟದ ವಿರಾಮದ ನಂತರ ಸ್ಟೋಕ್ಸ್ ವಿಕೆಟನ್ನು ಪಡೆದ ಜಡೇಜ ಈ ಮೈಲಿಗಲ್ಲು ತಲುಪಿದರು.
ಅನಿಲ್ ಕುಂಬ್ಳೆ(350), ಆರ್.ಅಶ್ವಿನ್(347), ಹರ್ಭಜನ್ ಸಿಂಗ್(265) ಹಾಗೂ ಕಪಿಲ್ದೇವ್(219)ಜಡೇಜಗಿಂತ ಮೊದಲು ತವರು ನೆಲದಲ್ಲಿ 200ಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಗಳಾಗಿದ್ದಾರೆ.
ತವರು ಮೈದಾನದಲ್ಲಿ ಆಡುತ್ತಿರುವ ಜಡೇಜ ಭಾರತದ ಮೊದಲ ಇನಿಂಗ್ಸ್ ನಲ್ಲಿ 112 ರನ್ ಗಳಿಸಿದ್ದರು. ಟೆಸ್ಟ್ ನಲ್ಲಿ 3,000 ರನ್ ಹಾಗೂ 200 ವಿಕೆಟ್ ಗಳನ್ನು ಪಡೆದ ಭಾರತದ ಮೂರನೇ ಹಾಗೂ ವಿಶ್ವದ 17ನೇ ಆಲ್ರೌಂಡರ್ ಎಂಬ ದಾಖಲೆ ನಿರ್ಮಿಸಿದ್ದರು.
ಜಡೇಜ ಟೆಸ್ಟ್ ನಲ್ಲಿ 4ನೇ ಹಾಗೂ ಇಂಗ್ಲೆಂಡ್ ವಿರುದ್ಧ 2ನೇ ಶತಕವನ್ನು ಸಿಡಿಸಿದರು.