ಭಾರತ ವಿರುದ್ಧ 50 ರನ್‌ಗೆ ಆಲೌಟ್: ಏಕದಿನ ಕ್ರಿಕೆಟ್‌ನಲ್ಲಿ 2ನೇ ಕನಿಷ್ಠ ಸ್ಕೋರ್ ಗಳಿಸಿದ ಶ್ರೀಲಂಕಾ

Update: 2023-09-17 13:11 GMT

Photo: Twitter//@ICC

ಕೊಲಂಬೊ: ಏಶ್ಯಕಪ್ ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ಕೇವಲ 50 ರನ್‌ಗೆ ಆಲೌಟಾಗಿರುವ ಶ್ರೀಲಂಕಾ ಕ್ರಿಕೆಟ್ ತಂಡವು ಏಕದಿನ ಕ್ರಿಕೆಟ್‌ನಲ್ಲಿ 2ನೇ ಬಾರಿ ಕನಿಷ್ಠ ಸ್ಕೋರ್ ದಾಖಲಿಸಿದೆ.

ಶ್ರೀಲಂಕಾವು 2012ರಲ್ಲಿ ಪಾರ್ಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 43 ರನ್‌ಗೆ ಆಲೌಟ್ ಆಗಿತ್ತು.

ಏಕದಿನ ಕ್ರಿಕೆಟ್‌ನಲ್ಲಿ ಕನಿಷ್ಠ ಸ್ಕೋರ್ ಗಳಿಸಿದ ದಾಖಲೆಯು ಝಿಂಬಾಬ್ವೆ ತಂಡದ ಹೆಸರಲ್ಲಿದೆ. ಆ ತಂಡವು 2004ರಲ್ಲಿ ಶ್ರೀಲಂಕಾ ವಿರುದ್ದ ಕೇವಲ 35 ರನ್‌ಗೆ ಆಲೌಟಾಗಿತ್ತು.

ಏಕದಿನ ಕ್ರಿಕೆಟ್ ನ ಟಾಪ್-10 ಕನಿಷ್ಠ ಸ್ಕೋರ್‌ಗಳು

1.ಝಿಂಬಾಬ್ವೆ-2004ರಲ್ಲಿ ಹರಾರೆಯಲ್ಲಿ ಶ್ರೀಲಂಕಾ ವಿರುದ್ಧ 35 ರನ್

2.ಅಮೆರಿಕ-2020ರಲ್ಲಿ ಕಿರ್ತಿಪುರದಲ್ಲಿ ನೇಪಾಳದ ವಿರುದ್ಧ 35 ರನ್

3.ಕೆನಡಾ-2003ರಲ್ಲಿ ಪಾರ್ಲ್‌ನಲ್ಲಿ ಶ್ರೀಲಂಕಾ ವಿರುದ್ಧ 36 ರನ್

4.ಝಿಂಬಾಬ್ವೆ-2001ರಲ್ಲಿ ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧ 38 ರನ್

5.ಶ್ರೀಲಂಕಾ-2012ರಲ್ಲಿ ಪಾರ್ಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 43 ರನ್

6.ಪಾಕಿಸ್ತಾನ-1993ರಲ್ಲಿ ಕೇಪ್‌ಟೌನ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ 43 ರನ್.

7.ಝಿಂಬಾಬ್ವೆ-2009ರಲ್ಲಿ ಚಿತ್ತಗಾಂಗ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 44 ರನ್

8.ಕೆನಡಾ-1979ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ವಿರುದ್ಧ 45 ರನ್

9.ನಮೀಬಿಯಾ-2003ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ 45 ರನ್

10.ಶ್ರೀಲಂಕಾ-2023ರಲ್ಲಿ ಕೊಲಂಬೊದಲ್ಲಿ ಭಾರತ ವಿರುದ್ಧ 50 ರನ್

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News