6 ಎಸೆತಗಳಲ್ಲಿ 6 ವಿಕೆಟ್: ಇತಿಹಾಸ ಸೃಷ್ಟಿಸಿದ ಆಸ್ಟ್ರೇಲಿಯನ್ ಥರ್ಡ್ ಡಿವಿಶನ್ ಕ್ಲಬ್ ಕ್ರಿಕೆಟಿಗ

Update: 2023-11-13 18:00 GMT

Photo : twitter.com/sports_tak

ಗೋಲ್ಡ್ ಕೋಸ್ಟ್ (ಆಸ್ಟ್ರೇಲಿಯ), ನ. 13: ಆಸ್ಟ್ರೇಲಿಯದ ಥರ್ಡ್ ಡಿವಿಶನ್ ಕ್ಲಬ್ ಕ್ರಿಕೆಟಿಗರೊಬ್ಬರು ಆರು ಎಸೆತಗಳಲ್ಲಿ ಆರು ವಿಕೆಟ್ ಗಳನ್ನು ಉರುಳಿಸಿ ಇತಿಹಾಸ ಸೃಷ್ಟಿಸಿದ್ದಾರೆ.

ಗೋಲ್ಡ್ ಕೋಸ್ಟ್ ನಲ್ಲಿ ಶನಿವಾರ ನಡೆದ ಗೋಲ್ಡ್ ಕೋಸ್ಟ್ ನ ಪ್ರೀಮಿಯರ್ ಲೀಗ್ ಡಿವಿಶನ್ 3 ಪಂದ್ಯಾವಳಿಯಲ್ಲಿ, ಮಜೀರಬ ನೆರಂಗ್ ಆ್ಯಂಡ್ ಡಿಸ್ಟ್ರಿಕ್ಟ್ಸ್ ಕ್ರಿಕೆಟ್ ಕ್ಲಬ್ ನಾಯಕ ಗ್ಯಾರೆತ್ ಮೋರ್ಗನ್ ಯಾವುದೇ ರನ್ ನೀಡದೆ ಒಂದು ಓವರ್ ನ ಆರು ಎಸೆತಗಳಲ್ಲಿ ಆರು ವಿಕೆಟ್ ಗಳನ್ನು ಪಡೆದರು. ಆ ಮೂಲಕ ಅವರ ತಂಡವು ಸರ್ಫರ್ಸ್ ಪ್ಯಾರಡೈಸ್ ಸಿಸಿ ತಂಡದ ವಿರುದ್ಧ ನಾಲ್ಕು ರನ್ ಗಳ ರೋಮಾಂಚಕ ಗೆಲುವು ದಾಖಲಿಸಿತು.

ಸರ್ಫರ್ಸ್ ಪ್ಯಾರಡೈಸ್ ತಂಡದ ಗೆಲುವಿಗೆ 40 ಓವರ್ ಗಳಲ್ಲಿ 178 ರನ್ ಗಳ ಅಗತ್ಯವಿತ್ತು. 39ನೇ ಓವರ್ ನಲ್ಲಿ ಅದು 4 ವಿಕೆಟ್ ಗಳ ನಷ್ಟಕ್ಕೆ 174 ರನ್ ಗಳನ್ನು ಗಳಿಸಿತ್ತು. ಗೆಲ್ಲಲು ಅದಕ್ಕೆ ಕೊನೆಯ ಓವರ್ ನಲ್ಲಿ ಕೇವಲ 4 ರನ್ ಗಳ ಅಗತ್ಯವಿತ್ತು.

ಆದರೆ, ಕೊನೆಯ ಓವರ್ ಎಸೆದ ಮೋರ್ಗನ್ ಪಂದ್ಯದ ಗತಿಯನ್ನೇ ಬದಲಿಸಿದರು. ಅವರು ಕೊನೆಯ ಓವರ್ ನ ಪ್ರತಿಯೊಂದು ಎಸೆತದಲ್ಲೂ ವಿಕೆಟ್ ಗಳನ್ನು ಉರುಳಿಸುತ್ತಾ ಸಾಗಿದರು. ಅಂತಿಮವಾಗಿ ಸರ್ಫರ್ಸ್ ಪ್ಯಾರಡೈಸ್ 174 ರನ್ ಗಳಿಗೆ ಆಲೌಟಾಯಿತು. ಐವರು ಬ್ಯಾಟರ್ಗಳು ಶೂನ್ಯಕ್ಕೆ ಮರಳಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News