ಇಂಗ್ಲೆಂಡ್ ನ ಮಾಜಿ ವೇಗದ ಬೌಲರ್ ಪೀಟರ್ ಲಿವರ್ ನಿಧನ

ಪೀಟರ್ ಲಿವರ್ | PC : X
ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಪೀಟರ್ ಲಿವರ್ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ಪ್ರಾಯವಾಗಿತ್ತು.
ಲಿವರ್ ಅವರು 1970-71ರಲ್ಲಿ ಆಸ್ಟ್ರೇಲಿಯದಲ್ಲಿ ನಡೆದ ಆ್ಯಶಸ್ ಸರಣಿಯನ್ನು ಇಂಗ್ಲೆಂಡ್ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಅವರು 17 ಟೆಸ್ಟ್ಗಳನ್ನು ಆಡಿ 41 ವಿಕೆಟ್ಗಳನ್ನು ಗಳಿಸಿದ್ದರು 10 ಏಕದಿನ ಪಂದ್ಯಗಳನ್ನೂ ಆಡಿದ್ದಾರೆ. ಏಕದಿನ ಮಾದರಿಯ ಮೊದಲ ಪಂದ್ಯವನ್ನು ಆಡಿರುವ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. ಆ ಪಂದ್ಯವನ್ನು ಅವರು 1971ರಲ್ಲಿ ಆಸ್ಟ್ರೇಲಿಯದ ವಿರುದ್ಧ ಆಡಿದ್ದರು.
1970-71ರ ಆಸ್ಟ್ರೇಲಿಯ ಪ್ರವಾಸದ ವೇಳೆ ರೇಮಂಡ್ ಇಲಿಂಗ್ವರ್ತ್ ನೇತೃತ್ವದ ಇಂಗ್ಲೆಂಡ್ ತಂಡದಲ್ಲಿ ತನ್ನ ಚೊಚ್ಚಲ ಟೆಸ್ಟ್ ಆಡಿದ್ದರು. 1975ರಲ್ಲಿ ಆಸ್ಟ್ರೇಲಿಯದಲ್ಲಿ ಮತ್ತೊಮ್ಮೆ ಮಿಂಚಿದ್ದರು. ಆ ಪ್ರವಾಸದಲ್ಲಿ ಮೆಲ್ಬರ್ನ್ನಲ್ಲಿ ನಡೆದ ಟೆಸ್ಟ್ನಲ್ಲಿ 38 ರನ್ಗಳನ್ನು ನೀಡಿ 6 ವಿಕೆಟ್ಗಳನ್ನು ಪಡೆದರು. ಇದು ಅವರ ಜೀವನಶ್ರೇಷ್ಠ ನಿರ್ವಹಣೆಯಾಗಿದೆ.