ಫೋಗಟ್ ಜೊತೆಗಿದ್ದ ಸಹಾಯಕ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಬೇಕು : ಸಂಜಯ್ ಸಿಂಗ್

Update: 2024-08-07 17:04 GMT

PC : PTI

ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ವಿನೇಶ್ ಫೋಗಟ್ ಜೊತೆಗಿದ್ದ ಸಹಾಯಕ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷ ಸಂಜಯ್ ಸಿಂಗ್ ಒತ್ತಾಯಿಸಿದ್ದಾರೆ.

ಫೈನಲ್ಗೆ ಪ್ರವೇಶ ಪಡೆಯುವುದಕ್ಕೂ ಮೊದಲು ವಿನೇಶ್ ಅವರ ತೂಕವನ್ನು ಸೂಕ್ತವಾಗಿ ನಿರ್ವಹಿಸದೇ ಮಹಾಪರಾಧ ಎಸಗಿರುವ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಜಯ್ ತಿಳಿಸಿದ್ದಾರೆ.

ಕ್ವಾರ್ಟರ್, ಸೆಮಿ ಫೈನಲ್ನಲ್ಲಿ ಭರ್ಜರಿ ಪ್ರದರ್ಶನದ ಮೂಲಕ ಫೈನಲ್ಗೆ ತಲುಪಿದ್ದ ವಿನೇಶ್ ಅವರು ನಿಗದಿತ 50 ಕೆಜಿ ತೂಕಕ್ಕಿಂತ 100ಗ್ರಾಂ ಹೆಚ್ಚಿದ್ದಾರೆ ಎಂದು ಫೈನಲ್ನಲ್ಲಿ ಆಡಲು ಅವಕಾಶ ಕೊಡದೆ ಅನರ್ಹಗೊಳಿಸಲಾಗಿತ್ತು.

ವಿನೇಶ್ ಅವರ ಕೋಚ್ ಆಗಿ ಬೆಲ್ಜಿಯಮ್ ಮೂಲದ ವೂಲ್ಲರ್ ಅಕೋಸ್ ಕೆಲಸ ಮಾಡುತ್ತಿದ್ದಾರೆ. ಮಾನಸಿಕ ಆರೋಗ್ಯ ನಿಯಂತ್ರಣಕ್ಕೆ ಸಂಬಂಧಿಸಿ ಕೋಚ್ ಆಗಿ ದಕ್ಷಿಣ ಆಫ್ರಿಕಾದ ವೇಯ್ಸ್ ಲೊಂಬಾರ್ಡ್ ಅವರಿದ್ದಾರೆ.

ಇದರಲ್ಲಿ ಖಂಡಿತವಾಗಿಯೂ ವಿನೇಶ್ ತಪ್ಪಲ್ಲ. ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಕೋಚ್ಗಳು, ಸಹಾಯಕ ಸಿಬ್ಬಂದಿ, ಫಿಸಿಯೊ ಹಾಗೂ ನ್ಯೂಟ್ರಿಶಿಯನಿಸ್ಟ್ಗಳು ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಬೇಕು. ಈ ರೀತಿಯ ಯಾವುದೇ ಸಮಸ್ಯೆ ಬಾರದಂತೆ ಸಹಾಯಕ ಸಿಬ್ಬಂದಿ ವಿನೇಶ್ ಮೇಲೆ ಸದಾಕಾಲ ನಿಗಾ ಇಡಬೇಕಿತ್ತು. ಇದೆಲ್ಲ ಹೇಗಾಯಿತು? ವಿನೇಶ್ ಹೇಗೆ ಅಧಿಕ ತೂಕ ಹೊಂದಿದರು? ಎಂಬ ಬಗ್ಗೆ ಸಮಗ್ರ ಪರಿಶೀಲನೆ ನಡೆಯಬೇಕು. ಈ ಎಲ್ಲ ಹೊಣೆಗಾರರ ಮೇಲೆ ಕ್ರಮ ಕೈಗೊಳ್ಳಬೇಕು ಸರಕಾರವನ್ನು ಒತ್ತಾಯಿಸುತ್ತೇನೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News