ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ | ಮುಂಬೈ ಕ್ರಿಕೆಟ್ ತಂಡಕ್ಕೆ ಅಜಿಂಕ್ಯ ರಹಾನೆ ನಾಯಕ

Update: 2024-11-15 15:44 GMT

ಅಜಿಂಕ್ಯ ರಹಾನೆ |  PTI 

ಮುಂಬೈ: ಭಾರತದ ಹಿರಿಯ ಬ್ಯಾಟರ್ ಅಜಿಂಕ್ಯ ರಹಾನೆ ನವೆಂಬರ್ 23ರಿಂದ ಡಿಸೆಂಬರ್ 5ರ ತನಕ ನಡೆಯಲಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ಕ್ರಿಕೆಟ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.

ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ವೇಗದ ಬೌಲರ್ ತುಷಾರ್ ದೇಶಪಾಂಡೆ ಚೇತರಿಕೆಯ ಹಾದಿಯಲ್ಲಿದ್ದಾರೆ. 29ರ ಹರೆಯದ ತುಷಾರ್ ಐಪಿಎಲ್-2024ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮಿಂಚಿದ್ದು, ಈ ವರ್ಷಾರಂಭದಲ್ಲಿ ಮುಂಬೈ ತಂಡವು ರಣಜಿ ಟ್ರೋಫಿಯಲ್ಲಿ ಯಶಸ್ಸು ಕಾಣಲು ಪ್ರಮುಖ ಪಾತ್ರವಹಿಸಿದ್ದರು. ಜನವರಿ 23ರಿಂದ ಆರಂಭವಾಗಲಿರುವ ಎರಡನೇ ಹಂತದ ರಣಜಿ ಟ್ರೋಫಿ ಟೂರ್ನಿಯಲ್ಲಿ ತಂಡವನ್ನು ಮರು ಸೇರ್ಪಡೆಯಾಗುವ ನಿರೀಕ್ಷೆ ಇದೆ.

ತುಷಾರ್ ಮರಳಿಕೆಯು ಮುಂಬೈ ತಂಡದ ವೇಗದ ಬೌಲಿಂಗ್ ದಾಳಿಯನ್ನು ಬಲಿಷ್ಠಗೊಳಿಸಲಿದೆ. ಮುಂಬೈ ತಂಡವು ಶಾರ್ದೂಲ್ ಠಾಕೂರ್, ಜುನೇದ್ ಖಾನ್ ಹಾಗೂ ಮೋಹಿತ್‌ ರನ್ನು ಕಣಕ್ಕಿಳಿಸುವ ಗುರಿ ಇಟ್ಟುಕೊಂಡಿದೆ.

ಮುಂಬೈ ತಂಡಕ್ಕೆ ಪೃಥ್ವಿ ಶಾ ಮರಳಿದ್ದಾರೆ. 25ರ ಹರೆಯದ ಶಾ ಅವರು ಭಾರತ ತಂಡವನ್ನು 5 ಟೆಸ್ಟ್, 6 ಏಕದಿನ ಹಾಗೂ ಒಂದು ಟಿ-20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದು, ಫಿಟ್ನೆಸ್ ಹಾಗೂ ಅಶಿಸ್ತಿನ ಕಾರಣಕ್ಕೆ ಮುಂಬೈನ ರಣಜಿ ಟ್ರೋಫಿ ತಂಡದಿಂದ ಹೊರಗುಳಿದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News