ರಾಜಕೀಯ ಹಸ್ತಕ್ಷೇಪದ ಆರೋಪ ಮಾಡಿದ್ದ ಕ್ರಿಕೆಟಿಗ ಹನುಮ ವಿಹಾರಿ ವಿರುದ್ಧ ತನಿಖೆಗೆ ಆದೇಶ

Update: 2024-02-27 06:41 GMT

ಹನುಮ ವಿಹಾರಿ (Photo: PTI)

ಹೈದರಾಬಾದ್: ರಾಜಕಾರಣಿಯ ಪುತ್ರನಿಗೆ ಗದರಿದ್ದಕ್ಕೆ ನನಗೆ ತಂಡದ ನಾಯಕತ್ವ ತೊರೆಯುವಂತೆ ಸೂಚಿಸಲಾಯಿತು ಎಂಬ ಆಂಧ್ರಪ್ರದೇಶ ತಂಡದ ನಾಯಕ ಹನುಮ ವಿಹಾರಿ ಮಾಡಿರುವ ಆರೋಪದ ವಿರುದ್ಧ ಆಂಧ್ರ ಕ್ರಿಕೆಟ್ ಒಕ್ಕೂಟವು ತನಿಖೆಗೆ ಆದೇಶಿಸಿದೆ. ಮಧ್ಯಪ್ರದೇಶ ತಂಡದ ಎದುರಿನ ಪಂದ್ಯದಲ್ಲಿ ಸೋಲನುಭವಿಸುವ ಮೂಲಕ ಆಂಧ್ರಪ್ರದೇಶದ ರಣಜಿ ಟ್ರೋಫಿಯ ಅಭಿಯಾನವು ಕೊನೆಗೊಂಡ ನಂತರ, ನಾನು ಇನ್ನೆಂದೂ ಆಂಧ್ರಪ್ರದೇಶ ತಂಡದ ಪರ ಆಡುವುದಿಲ್ಲ ಎಂದು ಹನುಮ ವಿಹಾರಿ ಘೋಷಿಸಿದ್ದರು.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಆಂಧ್ರ ಕ್ರಿಕೆಟ್ ಒಕ್ಕೂಟವು, "ಹನುಮ ವಿಹಾರಿ ಅಶ್ಲೀಲ ಭಾಷೆಯನ್ನು ಬಳಸಿದ್ದಾರೆ ಎಂದು ಅವರ ಸಹ ಆಟಗಾರರು, ಆಂಧ್ರ ನೆರವು ಸಿಬ್ಬಂದಿಗಳು ಹಾಗೂ ಆಂಧ್ರ ಒಕ್ಕೂಟ ಆಡಳಿತ ಮಂಡಳಿಯ ಸದಸ್ಯರಿಂದ ನಮಗೆ ದೂರು ಬಂದಿದೆ" ಎಂದು ಹೇಳಿದೆ.

"ತಂಡದ ಸಹ ಆಟಗಾರರು, ನೆರವು ಸಿಬ್ಬಂದಿ ವರ್ಗ ಹಾಗೂ ಆಂಧ್ರ ಕ್ರಿಕೆಟ್ ಒಕ್ಕೂಟದ ಆಡಳಿತ ಮಂಡಳಿಯ ಸದಸ್ಯರಿಂದ ಹನುಮ ವಿಹಾರಿ ಅಶ್ಲೀಲ ಭಾಷೆ ಬಳಸಿದ್ದಾರೆ ಹಾಗೂ ನಿಂದನಾತ್ಮಕ ವರ್ತನೆ ತೋರಿದ್ದಾರೆ ಎಂಬ ದೂರು ಬಂದಿದ್ದು, ಈ ಎಲ್ಲ ದೂರಗಳ ಕುರಿತು ಆಂಧ್ರ ಕ್ರಿಕೆಟ್ ಒಕ್ಕೂಟವು ತನಿಖೆ ನಡೆಸಲಿದೆ. ನಂತರ ಈ ಕುರಿತು ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಲಾಗುವುದು" ಎಂದೂ ಹೇಳಿದೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಹನುಮ ವಿಹಾರಿ, "ಆಂಧ್ರ ಕ್ರಿಕೆಟ್ ಒಕ್ಕೂಟ ನನ್ನ ವಿರುದ್ಧ ಪಿತೂರಿ ನಡೆಸುತ್ತಿದೆ" ಎಂದು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News