ಶತಕದಂಚಿನಲ್ಲಿ ಎಡವಿದ ಬಾಂಗ್ಲಾ ನಾಯಕನ ಕಾಲೆಳೆದ ಆ್ಯಂಜೆಲೊ ಮ್ಯಾಥ್ಯೂಸ್

Update: 2023-11-06 18:18 GMT

Photo: x/@sav2413

ಹೊಸದಿಲ್ಲಿ: ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಯ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಲಂಕಾ ಆಲ್ ರೌಂಡರ್ ಆ್ಯಂಜೆಲೊ ಮ್ಯಾಥ್ಯೂಸ್ ಬಾಂಗ್ಲಾ ನಾಯಕ ಶಕೀಬ್ ರನ್ನು 82 ರನ್ ಗೆ ಔಟ್ ಮಾಡಿದ ಮೇಲೆ ಭಿನ್ನ ರೀತಿಯಲ್ಲಿ ಸಂಭ್ರಮಿಸಿದರು.

ಈ ಪಂದ್ಯದಲ್ಲಿ ಬಾಂಗ್ಲಾದೇಶ 3 ವಿಕೆಟ್ ಗಳಿಂದ ಜಯ ಸಾಧಿಸಿದ್ದರೂ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಕೀಬ್ರನ್ನು ಶತಕದ ಅಂಚಿನಲ್ಲಿ ಕೆಡವಿದ ಆ್ಯಂಜೆಲೊ ಮ್ಯಾಥ್ಯೂಸ್, ತನ್ನ 'ಟೈಮ್-ಔಟ್' ಗೆ ಕಾರಣರಾದ ಶಕೀಬ್‌ ರ ವಿಕೆಟ್‌ ಪಡೆದು “ಕಾಲ ಎಲ್ಲರ ಕಾಲೆಳೆಯುತ್ತೆ” ಎಂಬಂತೆ ಕಾಲ್ಪನಿಕ ಕೈ ಗಡಿಯಾರದ ಸನ್ನೆ ಮಾಡಿ ತಮ್ಮ ಅಸಹನೆ ಹೊರ ಹಾಕಿದರು.

2023 ರ ಐಸಿಸಿ ವಿಶ್ವಕಪ್ನಲ್ಲಿ ಏಷ್ಯನ್ ಪ್ರತಿಸ್ಪರ್ಧಿಗಳ ನಡುವಿನ ರೋಮಾಂಚಕ ಮುಖಾಮುಖಿಯಲ್ಲಿ ಮೊದಲು ಬ್ಯಾಟ್ ಮಾಡಿದ್ದ ಶ್ರೀಲಂಕಾ 280 ರನ್ ಗಳ ಗುರಿ ನೀಡಿತ್ತು. ಈ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿದ್ದ ಬಾಂಗ್ಲಾ 3 ವಿಕೆಟ್ ಗೆಲುವು ಸಾಧಿಸಿತು . ಆದರೆ ಈ ಪಂದ್ಯದಲ್ಲಿ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಹಾಗೂ ನಜ್ಮುಲ್ ಹುಸೈನ್ ಶಾಂಟೊ ಇಬ್ಬರನ್ನೂ ಆ್ಯಂಜೆಲೊ ಮ್ಯಾಥ್ಯೂಸ್ ಶತಕದ ಹೊಸ್ತಿಲ್ಲಿ ಔಟ್ ಮಾಡಿದ್ದರು.

ಮ್ಯಾಥ್ಯೂಸ್ 'ಟೈಮ್ಡ್-ಔಟ್'

ಪ್ರಥಮ ಇನ್ನಿಂಗ್ಸ್‌ ನಲ್ಲಿ ಶ್ರೀಲಂಕಾದ ಅನುಭವಿ ಆಲ್‌ ರೌಂಡರ್ ಆ್ಯಂಜೆಲೊ ಮ್ಯಾಥ್ಯೂಸ್ ರನ್ನು ಬಾಂಗ್ಲಾ ದೇಶದ ಮನವಿಯಂತೆ ವಿವಾದಾತ್ಮಕವಾಗಿ 'ಟೈಮ್ ಔಟ್' ಘೋಷಿಸಲಾಯಿತು. ಪರಿಣಾಮ 146 ವರ್ಷಗಳ ಅಂತರ್ರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಮ್ಯಾಥ್ಯೂಸ್ ಮೊದಲ 'ಟೈಮ್ಡ್-ಔಟ್' ಆದ ಮೊದಲ ಆಟಗಾರರಾದರು. ಆದರೆ ಇದಕ್ಕೂ ಮುನ್ನ ಬಾಂಗ್ಲಾ ನಾಯಕನ ಬಳಿ ಅವರು ಸಂಕ್ಷಿಪ್ತ ಮಾತುಕತೆ ನಡೆಸಿದ್ದರು. ಅದರೆ ಬಾಂಗ್ಲಾ ತನ್ನ ಮನವಿಯನ್ನು ಹಿಂಪಡೆಯಲು ನಿರಾಕರಿಸಿತು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News