ವಿನೇಶ್ ಫೋಗಟ್ ಮೇಲ್ಮನವಿ ವಜಾ | ಸ್ವ್ವಿಸ್ ಫೆಡರಲ್ ಟ್ರಿಬ್ಯೂನಲ್‌ನಲ್ಲಿ 30 ದಿನಗಳಲ್ಲಿ ಮೇಲ್ಮನವಿ ಸಲ್ಲಿಸಬಹುದು

Update: 2024-08-15 16:18 GMT

ವಿನೇಶ್ ಫೋಗಟ್ | PC : PTI 

ಹೊಸದಿಲ್ಲಿ : ಕುಸ್ತಿಪಟು ವಿನೇಶ್ ಫೋಗಟ್ ತನ್ನ ವಿರುದ್ಧದ ಅನರ್ಹತೆ ಕುರಿತು ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿ ಕೇವಲ ಒಂದು ಸಾಲಿನ ಆದೇಶ ಬಂದಿದೆ. ವಿವರವಾದ ಆದೇಶ ಇನ್ನೂ ಬಂದಿಲ್ಲ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ(ಐಒಎ)ವಕೀಲ ವಿದುಷ್ಪತ್ ಸಿಂಘಾನಿಯಾ ದೃಢಪಡಿಸಿದ್ದಾರೆ.

ಬುಧವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಕ್ರೀಡಾ ನ್ಯಾಯ ಮಂಡಳಿ(ಸಿಎಎಸ್) ಆಗಸ್ಟ್ 7ರಂದು ವಿನೇಶ್ ಫೋಗಟ್ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಖಚಿತಪಡಿಸಿತ್ತು.

ಎಎನ್‌ಐ ಜೊತೆ ಮಾತನಾಡಿದ ಸಿಂಘಾನಿಯಾ, ವಿನೇಶ್ ಅವರ ಅರ್ಜಿಯನ್ನು ಏಕೆ ತಿರಸ್ಕರಿಸಲಾಗಿದೆ ಎಂಬ ಕುರಿತು ಸಿಎಎಸ್ ಕಾರಣವನ್ನು ಉಲ್ಲೇಖಿಸಿಲ್ಲ. ಸಿಎಎಸ್ ತೀರ್ಪಿನ ವಿರುದ್ಧ ಸ್ವಿಸ್ ಫೆಡರಲ್ ಟ್ರಿಬ್ಯೂನಲ್‌ನಲ್ಲಿ 30 ದಿನಗಳಲ್ಲಿ ಮೇಲ್ಮನವಿ ಸಲ್ಲಿಸಬಹುದು ಎಂದು ಹೇಳಿದರು.

ವಿವರವಾದ ಆದೇಶ ಇನ್ನೂ ಬಂದಿಲ್ಲ. ವಿನೇಶ್ ಮೇಲ್ಮನವಿಯನ್ನು ವಜಾಗೊಳಿಸಿರುವ ಒಂದು ಸಾಲಿನ ಆದೇಶವೊಂದು ಇಲ್ಲಿಯ ತನಕ ಬಂದಿದೆ. ಅರ್ಜಿಯನ್ನು ಏಕೆ ವಜಾಗೊಳಿಸಲಾಗಿದೆ ಅಥವಾ ಏಕೆ ಹೆಚ್ಚು ಸಮಯ ತೆಗೆದುಕೊಳ್ಳಲಾಗಿದೆ ಎಂಬ ಕಾರಣವನ್ನು ಅವರು ಉಲ್ಲೇಖಿಸಿಲ್ಲ. ನಿನ್ನೆ ಸಂಜೆ ಆದೇಶ ಬಂದಿದ್ದು, ವಿನೇಶ್‌ರ ಮನವಿಯನ್ನು ವಜಾಗೊಳಿಸಿದ್ದರಿಂದ ನಮಗೆ ಆಶ್ಚರ್ಯ ಹಾಗೂ ನಿರಾಶೆಯಾಗಿದೆ. 10-15 ದಿನಗಳಲ್ಲಿ ವಿವರವಾದ ಆದೇಶ ಬರುತ್ತದೆ ಎಂದು ನಾವು ಭಾವಿಸುತ್ತೇವೆ. ಸಿಎಎಸ್ ನಿರ್ಧಾರದ ವಿರುದ್ಧ 30 ದಿನಗಳಲ್ಲಿ ಸ್ವಿಸ್ ಫೆಡರಲ್ ಟ್ರಿಬ್ಯೂನಲ್‌ನಲ್ಲಿ ಮೇಲ್ಮನವಿ ಸಲ್ಲಿಸಬಹುದು. ವಿವರವಾದ ಆದೇಶ ಬಂದ ನಂತರ 30 ದಿನಗಳಲ್ಲಿ ಸಿಎಎಸ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು. ಹರೀಶ್ ಸಾಳ್ವೆ ನಮ್ಮೊಂದಿಗಿದ್ದಾರೆ, ಅವರು ನಮಗೆ ಮಾರ್ಗದರ್ಶನ ನೀಡುತ್ತಾರೆ. ನಾವು ಅವರೊಂದಿಗೆ ಕುರಿತು ಮೇಲ್ಮನವಿಯ ಕರಡನ್ನು ಸಿದ್ಧಪಡಿಸಿ ಸಲ್ಲಿಸುತ್ತೇವೆ ಎಂದು ವಿದುಷ್ಪತಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News