ಆರ್ಕ್‌ಟಿಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ | ಪ್ರಿ-ಕ್ವಾರ್ಟರ್ ಫೈನಲ್‌ಗೆ ಮಾಳವಿಕಾ ಬಾನ್ಸೋಡ್

Update: 2024-10-09 16:59 GMT

ಮಾಳವಿಕಾ ಬಾನ್ಸೋಡ್ | PC : PTi

ವಾಂಟಾ : ಈ ವರ್ಷ ತನ್ನ ಶ್ರೇಷ್ಠ ಫಾರ್ಮ್ ಮುಂದುವರಿಸಿದ ಭಾರತದ ಉದಯೋನ್ಮುಖ ಶಟ್ಲರ್ ಮಾಳವಿಕಾ ಬಾನ್ಸೋಡ್ ಚೈನೀಸ್ ತೈಪೆಯ ಸಂಗ್ ಶುಯೊ ಯುನ್‌ರನ್ನು ಮಣಿಸಿ ಆರ್ಕ್‌ಟಿಕ್ ಓಪನ್ ಸೂಪರ್- 500 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ಮಂಗಳವಾರ 57 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 23 ರ ಹರೆಯದ ಮಾಳವಿಕಾ ಅವರು ವಿಶ್ವದ ನಂ.23ನೇ ಆಟಗಾರ್ತಿ ಯೂನ್‌ರನ್ನು 21-19, 24-22 ಸೆಟ್‌ಗಳ ಅಂತರದಿಂದ ಮಣಿಸಿದರು.

ಈ ಗೆಲುವು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮಾಳವಿಕಾ ಅವರ ಬೆಳವಣಿಗೆಗೆ ಸಾಕ್ಷಿಯಾಗಿದೆ.

ನಾಗ್ಪುರದ ಶಟ್ಲರ್ ಮುಂದಿನ ಸುತ್ತಿನಲ್ಲಿ ಮಾಜಿ ವಿಶ್ವ ಚಾಂಪಿಯನ್ ಆಟಗಾರ್ತಿಯನ್ನು ಎದುರಿಸಲು ಸಜ್ಜಾಗಿದ್ದಾರೆ.

ಥಾಯ್ಲೆಂಡ್‌ನ 2016ರ ವಿಶ್ವ ಚಾಂಪಿಯನ್ ರಚನೊಕ್ ಇಂತನಾನ್ ಅಥವಾ ಚೀನಾದ 2022ರ ವಿಶ್ವ ಚಾಂಪಿಯನ್ ವಾಂಗ್ ಝಿ ಯೀ ಅವರನ್ನು ಮಾಳವಿಕಾ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಎದುರಿಸಲಿದ್ದಾರೆ.

ಭಾರತದ ಸ್ಟಾರ್ ಶಟ್ಲರ್ ಪಿ.ವಿ. ಸಿಂಧು, ಆಕರ್ಷಿ ಕಶ್ಯಪ್ ಹಾಗೂ ಕ್ವಾಲಿಫೈಯರ್ ಉನ್ನತಿ ಹೂಡಾ ಅವರು ಮಹಿಳೆಯರ ಸಿಂಗಲ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್,ಕಿರಣ್ ಜಾರ್ಜ್ ಅವರಿದ್ದಾರೆ. ಮಹಿಳೆಯರ ಡಬಲ್ಸ್‌ನಲ್ಲಿ ಋತುಪರ್ಣ ಹಾಗೂ ಸ್ವೇತಪರ್ಣ ಅವರು ಸ್ಪರ್ಧಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News