ಏಶ್ಯನ್ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್ | ಐತಿಹಾಸಿಕ ಕಂಚು ಗೆದ್ದ ಭಾರತದ ಮಹಿಳೆಯರ ತಂಡ

Update: 2024-10-09 16:54 GMT

PC : x

ಚೆನ್ನೈ : ಕಝಕ್‌ಸ್ತಾನದ ಅಸ್ತಾನದಲ್ಲಿ ಬುಧವಾರ ನಡೆದ ಏಶ್ಯನ್ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಹಿಳೆಯರ ತಂಡ ಕಂಚಿನ ಪದಕ ಗೆದ್ದುಕೊಂಡು ಇತಿಹಾಸ ನಿರ್ಮಿಸಿದೆ.

1972ರಲ್ಲಿ ಏಶ್ಯನ್ ಟೇಬಲ್ ಟೆನಿಸ್ ಯೂನಿಯನ್ ಈ ಸ್ಪರ್ಧಾವಳಿಯನ್ನು ಆಯೋಜಿಸಲು ಆರಂಭಿಸಿದ ನಂತರ ಮೊತ್ತ ಮೊದಲ ಬಾರಿ ಮಹಿಳೆಯರ ಟೀಮ್ ಸ್ಫರ್ಧೆಯಲ್ಲಿ ಭಾರತವು ಪದಕ ಗೆದ್ದುಕೊಂಡಿದೆ.

ಭಾರತ ತಂಡವು ಸೆಮಿ ಫೈನಲ್‌ನಲ್ಲಿ ಜಪಾನ್ ವಿರುದ್ಧ 1-3 ಅಂತರದಿಂದ ಸೋತಿತ್ತು. ಮತ್ತೊಂದು ಸೆಮಿ ಫೈನಲ್‌ನಲ್ಲಿ ಚೀನಾ ತಂಡವು ಹಾಂಕಾಂಗ್ ತಂಡವನ್ನು 3-0 ಅಂತರದಿಂದ ಸೋಲಿಸಿದೆ. ಸೋಲುಂಡಿರುವ ಎರಡೂ ಸೆಮಿ ಫೈನಲಿಸ್ಟ್ ತಂಡಗಳಿಗೆ ಕಂಚಿನ ಪದಕ ನೀಡಲಾಗುತ್ತದೆ.

ತೀವ್ರ ಪೈಪೋಟಿಯಿಂದ ಕೂಡಿದ್ದ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಅಹಿಕಾ ಮುಖರ್ಜಿ ಅವರು ಮಿವಾ ಹರಿಮೊಟೊ ವಿರುದ್ಧ 2-3 ಅಂತರದಿಂದ ಸೋತಿದ್ದಾರೆ. ಸಟ್ಸುಕಿ ಒಡೊ ವಿರುದ್ಧ 3-0 ಅಂತರದಿಂದ ಜಯಶಾಲಿಯಾದ ಮಣಿಕಾ ಬಾತ್ರಾ ಸ್ಕೋರನ್ನು 1-1ರಿಂದ ಸಮಬಲಗೊಳಿಸಿದರು.

ಮಿಮಾ ಅವರು ಸುತೀರ್ಥ ಮುಖರ್ಜಿ ಅವರನ್ನು 3-0 ಅಂತರದಿಂದಲೂ, ಹರಿಮೊಟೊ ಅವರು ಬಾತ್ರಾರನ್ನು 3-1 ಅಂತರದಿಂದಲೂ ಸೋಲಿಸಿ ಜಪಾನ್‌ಗೆ 3-1ರಿಂದ ಗೆಲುವು ತಂದುಕೊಟ್ಟರು.

ಮಂಗಳವಾರ ನಡೆದ ರೋಚಕ ಕ್ವಾರ್ಟರ್ ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ತಂಡವನ್ನು 3-2 ಅಂತರದಿಂದ ಮಣಿಸಿದ ಭಾರತವು ಪದಕವನ್ನು ದೃಢಪಡಿಸಿತ್ತು

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News