ಅರ್ಜೆಂಟೀನದ ವಿಶ್ವಕಪ್ ವಿಜೇತ ಕೋಚ್ ಸೀಸರ್ ಲೂಯಿಸ್ ಮೆನೊಟಿ ನಿಧನ
Update: 2024-05-06 17:04 GMT
ಮೆಕ್ಸಿಕೊ ಸಿಟಿ: ಅರ್ಜೆಂಟೀನ 1978ರಲ್ಲಿ ಪ್ರಶಸ್ತಿ ಗೆಲ್ಲಲು ಮಾರ್ಗದರ್ಶನ ನೀಡಿದ್ದ ವಿಶ್ವಕಪ್ ವಿಜೇತ ಕೋಚ್ ಸೀಸರ್ ಲೂಯಿಸ್ ಮೆನೊಟಿ ತನ್ನ 85ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಅರ್ಜೆಂಟೀನ ಫುಟ್ಬಾಲ್ ಅಸೋಸಿಯೇಶನ್ (ಎಎಫ್ಎ)ರವಿವಾರ ತಿಳಿಸಿದೆ.
ರೊಸಾರಿಯೊ ಸೆಂಟ್ರಲ್, ಬೊಕಾ ಜೂನಿಯರ್ಸ್ ಹಾಗೂ ಸ್ಯಾಂಟೊಸ್ ಪರ ಆಡಿರುವ ಮೆನೊಟಿ, ನೆವೆಲ್ಸ್ ಓಲ್ಡ್ ಬಾಯ್ಸ್ನೊಂದಿಗೆ ತನ್ನ ಕೋಚಿಂಗ್ ವೃತ್ತಿಬದುಕು ಆರಂಭಿಸಿದರು. 1973ರಲ್ಲಿ ಅರ್ಜೆಂಟೀನ ಚಾಂಪಿಯನ್ಶಿಪ್ ಜಯಿಸಿದ್ದರು. 1974ರಲ್ಲಿ ಅರ್ಜೆಂಟೀನ ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಹುದ್ದೆಯ ಹೊಣೆ ವಹಿಸಿಕೊಂಡಿದ್ದರು.
1982ರ ವಿಶ್ವಕಪ್ ನಂತರ ಅರ್ಜೆಂಟೀನ ತಂಡವನ್ನು ತೊರೆದಿದ್ದ ಮೆನೊಟಿ, ಬಾರ್ಸಿಲೋನಕ್ಕೆ ಕೋಚ್ ಆಗಿದ್ದರು. 1983ರಲ್ಲಿ ಬಾರ್ಸಿಲೋನ, ಕೋಪಾ ಡೆಲ್ ರೇ ಯಶಸ್ಸಿಗೆ ಕಾರಣರಾಗಿದ್ದರು.