ಏಶ್ಯಕಪ್: ಭಾರತ-ಪಾಕ್ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿ

Update: 2023-09-11 15:11 GMT

 Photo: twitter/@BCCI

ಕೊಲಂಬೊ, ಸೆ.11: ಭಾರತ ವಿರುದ್ಧ ಏಶ್ಯಕಪ್‌ನ ಸೂಪರ್-4 ಪಂದ್ಯದಲ್ಲಿ ಮೀಸಲು ದಿನದಾಟವಾದ ಸೋಮವಾರ ಗೆಲುವಿಗೆ 357 ರನ್ ಗುರಿ ಪಡೆದಿದ್ದ ಪಾಕಿಸ್ತಾನ ತಂಡ 11 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿದ್ದಾಗ ಮಳೆ ಅಡ್ಡಿಯಾಯಿತು.

ಪಾಕಿಸ್ತಾನ ಈ ಪಂದ್ಯವನ್ನು ಗೆಲ್ಲಲು 39 ಓವರ್‌ಗಳಲ್ಲಿ ಇನ್ನೂ 313 ರನ್ ಗಳಿಸುವ ಕಠಿಣ ಸವಾಲು ಹೊಂದಿದೆ. ಫಖರ್ ಝಮಾನ್(14 ರನ್) ಹಾಗೂ ಮುಹಮ್ಮದ್ ರಿಝ್ವಾನ್(1 ರನ್) ಕ್ರೀಸ್ ಕಾಯ್ದುಕೊಂಡಿದ್ದಾರೆ. ಇಮಾಮುಲ್‌ಹಕ್(9 ರನ್) ಹಾಗೂ ಬಾಬರ್ ಆಝಂ(10 ರನ್)ಔಟಾಗಿದ್ದಾರೆ.

ಜಸ್‌ಪ್ರೀತ್ ಬುಮ್ರಾ(1-18) ಹಾಗೂ ಹಾರ್ದಿಕ್ ಪಾಂಡ್ಯ(1-1) ತಲಾ ಒಂದು ವಿಕೆಟ್ ಪಡೆದಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News