ಏಶ್ಯಕಪ್: ಪಾಕಿಸ್ತಾನ ವಿರುದ್ಧ ಶತಕ ಸಿಡಿಸಿ ಅಬ್ಬರಿಸಿದ ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ

Update: 2023-09-11 13:04 GMT

 ಕೆ.ಎಲ್.ರಾಹುಲ್ ಹಾಗೂ ವಿರಾಟ್ ಕೊಹ್ಲಿ | Photo: twitter \ @BCCI

ಕೊಲಂಬೊ, ಸೆ.11: ಪಾಕಿಸ್ತಾನ ವಿರುದ್ಧ ಸೋಮವಾರ ನಡೆದ ಏಶ್ಯಕಪ್ ನ ಸೂಪರ್-4 ಪಂದ್ಯದಲ್ಲಿ ಭಾರತದ ಬ್ಯಾಟರ್ ಗಳಾದ ಕೆ.ಎಲ್.ರಾಹುಲ್ ಹಾಗೂ ವಿರಾಟ್ ಕೊಹ್ಲಿ ಆಕರ್ಷಕ ಶತಕ ಸಿಡಿಸಿ ಅಬ್ಬರಿಸಿದರು.

ಐಪಿಎಲ್ ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿ ದೀರ್ಘ ಸಮಯದ ಬಳಿಕ ಸಕ್ರಿಯ ಕ್ರಿಕೆಟಿಗೆ ವಾಪಸಾಗಿರುವ ರಾಹುಲ್ 100 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್ ಗಳ ನೆರವಿನಿಂದ 6ನೇ ಶತಕವನ್ನು ಪೂರೈಸಿದರು.

ಇನ್ನೋರ್ವ ಆಟಗಾರ ವಿರಾಟ್ ಕೊಹ್ಲಿ 84 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಾಯದಿಂದ ವೃತ್ತಿಜೀವನದ 47ನೇ ಶತಕ ಸಿಡಿಸಿ ಸಂಭ್ರಮಿಸಿದರು. ರಾಹುಲ್ ಜೊತೆಗೆ 3ನೇ ವಿಕೆಟ್ ಗೆ ಮುರಿಯದ ಜೊತೆಯಾಟದಲ್ಲಿ 199 ರನ್ ಸೇರಿಸಿದ ಕೊಹ್ಲಿ ಭಾರತದ ಮೊತ್ತವನ್ನು 320ರ ಗಡಿ ದಾಟಿಸಿದರು.

ರಾಹುಲ್ 60 ಎಸೆತಗಳಲ್ಲಿ 14ನೇ ಅರ್ಧಶತಕ ಪೂರೈಸಿದರು. ಕೊಹ್ಲಿ 55 ಎಸೆತಗಳಲ್ಲಿ 66ನೇ ಅರ್ಧಶತಕ ಗಳಿಸಿ ರಾಹುಲ್ ಗೆ ಸಾಥ್ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News