ಏಶ್ಯಕಪ್: ಭಾರತದ ಗೆಲುವಿಗೆ 231 ರನ್ ಗುರಿ ನೀಡಿದ ನೇಪಾಳ

Update: 2023-09-04 16:37 GMT

Photo: twitter \ @ICC

ಪಲ್ಲೆಕೆಲೆ : ಆರಂಭಿಕ ಬ್ಯಾಟರ್ ಆಸಿಫ್ ಶೇಖ್(58 ರನ್, 97 ಎಸೆತ) ಹಾಗೂ ಕೆಳ ಕ್ರಮಾಂಕದ ಸೋಂಪಲ್ ಕಮಿ(48 ರನ್, 56 ಎಸೆತ)ಸಾಹಸದ ನೆರವಿನಿಂದ ನೇಪಾಳ ಕ್ರಿಕೆಟ್ ತಂಡ ಏಶ್ಯಕಪ್‌ನ ಗ್ರೂಪ್ ಎ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗೆ 231 ರನ್ ಗುರಿ ನೀಡಿದೆ.

ಸೋಮವಾರ ಟಾಸ್ ಜಯಿಸಿದ ಭಾರತದ ನಾಯಕ ರೋಹಿತ್ ಶರ್ಮಾ ಅವರು ನೇಪಾಳ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು.

ಮಳೆ ಬಾಧಿತ ಪಂದ್ಯದಲ್ಲಿ ನೇಪಾಳ 48.2 ಓವರ್‌ಗಳಲ್ಲಿ 230 ರನ್ ಗಳಿಸಿ ಆಲೌಟಾಗಿದೆ.

ಇನಿಂಗ್ಸ್ ಆರಂಭಿಸಿದ ಆಸಿಫ್ ಶೇಖ್ ಹಾಗೂ ಕುಶಾಲ್ ಭುರ್ಟೆಲ್(38 ರನ್, 25 ಎಸೆತ)ಮೊದಲ ವಿಕೆಟ್‌ಗೆ 65 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ಆರಂಭಿಕ ಆಟಗಾರರ ಜೊತೆಯಾಟದ ನಂತರ ನೇಪಾಳದ ಅಗ್ರ ಸರದಿ ಕುಸಿತಕ್ಕೊಳಗಾಯಿತು.

ಭಾರತದ ಬೌಲಿಂಗ್‌ನಲ್ಲಿ ಸ್ಪಿನ್ನರ್ ರವೀಂದ್ರ ಜಡೇಜ(3-40),ಮುಹಮ್ಮದ್ ಸಿರಾಜ್(3-61)ಯಶಸ್ವಿ ಪ್ರದರ್ಶನ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News