ಏಶ್ಯಕಪ್: ಭಾರತ-ಪಾಕಿಸ್ತಾನ ನಡುವಿನ ಸೂಪರ್-4 ಪಂದ್ಯಕ್ಕೆ ಮಳೆ ಅಡ್ಡಿ

Update: 2023-09-10 12:10 GMT

Photo: Twitter 

ಕೊಲಂಬೊ, ಸೆ.10: ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆಯುತ್ತಿರುವ ಏಶ್ಯಕಪ್‌ನ ಸೂಪರ್-4 ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ.

ಪ್ರೇಮದಾಸ ಸ್ಟೇಡಿಯಮ್ ನಲ್ಲಿ ರವಿವಾರ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತವು ಮಳೆಯಿಂದಾಗಿ ಪಂದ್ಯ ನಿಂತಾಗ 24.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತ್ತು.

ಕೆ.ಎಲ್.ರಾಹುಲ್(ಔಟಾಗದೆ 17) ಹಾಗೂ ವಿರಾಟ್ ಕೊಹ್ಲಿ(ಔಟಾಗದೆ 8) ಕ್ರೀಸ್ ಕಾಯ್ದುಕೊಂಡಿದ್ದರು. ಇನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ(56 ರನ್, 49 ಎಸೆತ, 6 ಬೌಂಡರಿ, 4 ಸಿಕ್ಸರ್)ಹಾಗೂ ಶುಭಮನ್ ಗಿಲ್ (58 ರನ್, 52 ಎಸೆತ, 10 ಬೌಂಡರಿ)ಮೊದಲ ವಿಕೆಟ್‌ಗೆ 121 ರನ್ ಜೊತೆಯಾಟ ನಡೆಸಿ ಭರ್ಜರಿ ಆರಂಭ ಒದಗಿಸಿದರು.

ರೋಹಿತ್ ವಿಕೆಟ್ ಕಬಳಿಸಿದ ಶಾದಾಬ್ ಖಾನ್ ಈ ಜೋಡಿಯನ್ನು ಬೇರ್ಪಡಿಸಿದರು.

ಒಂದು ವೇಳೆ ಇಂದು ಪಂದ್ಯ ಪುನರಾರಂಭವಾಗದೇ ಇದ್ದರೆ ನಾಳೆ (ಸೋಮವಾರ)ಓವರ್ ನಷ್ಟವಿಲ್ಲದೆ ಪಂದ್ಯ ಆರಂಭವಾಗಲಿದೆ. ಇಂದು 20 ಓವರ್ ಪಂದ್ಯ ಆಡಲು ಸಾಧ್ಯವಾದರೆ ಅಂಪೈರ್‌ಗಳು ಮೀಸಲು ದಿನದ ಬದಲು ಇಂದೇ ಪಂದ್ಯ ಮುಗಿಸಲು ಎಲ್ಲ ರೀತಿಯ ಪ್ರಯತ್ನ ಮಾಡಬಹುದು.


Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News