ಏಶ್ಯಕಪ್ ಸೂಪರ್-4 ಪಂದ್ಯ: ಶ್ರೀಲಂಕಾ ವಿರುದ್ಧ ಭಾರತ ಜಯಭೇರಿ, ಫೈನಲ್‌ಗೆ ಲಗ್ಗೆ

Update: 2023-09-12 17:48 GMT

Photo: twitter\ @BCCI

ಕೊಲಂಬೊ, ಸೆ.12: ಸ್ಪಿನ್ನರ್ ಕುಲದೀಪ್ ಯಾದವ್ ನೇತೃತ್ವದಲ್ಲಿ ಶಿಸ್ತುಬದ್ಧ ಬೌಲಿಂಗ್ ಪ್ರದರ್ಶಿಸಿದ ಭಾರತ ಕ್ರಿಕೆಟ್ ತಂಡ ಶ್ರೀಲಂಕಾ ವಿರುದ್ಧದ ಏಶ್ಯಕಪ್ ಸೂಪರ್-4 ಪಂದ್ಯವನ್ನು 41 ರನ್ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಸತತ 2ನೇ ಗೆಲುವು ದಾಖಲಿಸಿದ ರೋಹಿತ್ ಶರ್ಮಾ ಬಳಗ 4 ಅಂಕದೊಂದಿಗೆ ಪ್ರಸಕ್ತ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಂಡಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ 49.1 ಓವರ್‌ಗಳಲ್ಲಿ 213 ರನ್ ಗಳಿಸಿ

ಆಲೌಟಾಯಿತು.

ಗೆಲ್ಲಲು 214 ರನ್ ಗುರಿ ಬೆನ್ನಟ್ಟಿದ ಲಂಕಾ ತಂಡ 41.3 ಓವರ್‌ಗಳಲ್ಲಿ 172 ರನ್ ಗಳಿಸಿ ಆಲೌಟಾಯಿತು. ಬೌಲಿಂಗ್‌ನಲ್ಲಿ ಮಿಂಚಿದ್ದ ಶ್ರೀಲಂಕಾದ 20ರ ಹರೆಯದ ಆಟಗಾರ ದುನಿತ್ ವೆಲ್ಲಲಾಗೆ (5-40) ಬ್ಯಾಟಿಂಗ್‌ನಲ್ಲೂ ಮಹತ್ವದ ಕೊಡುಗೆ(ಔಟಾಗದೆ 42 ರನ್,46 ಎಸೆತ) ನೀಡಿದರು. ಧನಂಜಯ ಡಿಸಿಲ್ವ(41 ರನ್,66 ಎಸೆತ)ಹಾಗೂ ಚರಿತ್ ಅಸಲಂಕ(22 ರನ್,35 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.

ಭಾರತದ ಪರ ಸ್ಪಿನ್ನರ್ ಕುಲದೀಪ್ ಯದವ್(4-43) ಯಶಸ್ವಿ ಪ್ರದರ್ಶನ ನೀಡಿದರು. ಜಸ್‌ಪ್ರಿತ್ ಬುಮ್ರಾ(2-30), ರವೀಂದ್ರ ಜಡೇಜ(2-33) ತಲಾ 2 ವಿಕೆಟ್ ಪಡೆದರು. ಇದಕ್ಕೂ ಮೊದಲು ಭಾರತಕ್ಕೆ ರೋಹಿತ್ ಶರ್ಮಾ(53 ರನ್, 48 ಎಸೆತ) ಹಾಗೂ ಶುಭಮನ್ ಗಿಲ್ (19 ರನ್, 25 ಎಸೆತ) ಮೊದಲ ವಿಕೆಟ್‌ಗೆ 11.1

ಓವರ್‌ಗಳಲ್ಲಿ 80 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News