ಏಶ್ಯನ್ ಗೇಮ್ಸ್: ಆರ್ಚರಿಯಲ್ಲಿ ಜ್ಯೋತಿ, ಅದಿತಿ, ಪರ್ನೀತ್‌ ಬಂಗಾರದ ಸಾಧನೆ

Update: 2023-10-05 06:34 GMT

Photo credit:X/@worldarchery

ಹ್ಯಾಂಗ್ ಝೌ: ಭಾರತೀಯ ಬಿಲ್ಲುಗಾರರಾದ ಜ್ಯೊತಿ ವೆನ್ನಮ್, ಅದಿತಿ ಸ್ವಾಮಿ ಹಾಗು ಪರ್ನೀತ್ ಅವರನ್ನೊಳಗೊಂಡ ತಂಡವು ಮಹಿಳಾ ಕಾಂಪೌಂಡ್ ಆರ್ಚರಿ ಪಂದ್ಯದಲ್ಲಿ ಚಿನ್ನದ ಪದಕ ಜಯಿಸಿದೆ. ಏಶ್ಯನ್ ಗೇಮ್ಸ್ ಕ್ರೀಡಾಕೂಟದ ಇತಿಹಾಸದಲ್ಲೇ ಭಾರತವು ಈ ಬಾರಿ ಪದಕ ಪಟ್ಟಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. ಅಕ್ಟೋಬರ್ 5ಕ್ಕೆ ಅಂತ್ಯಗೊಂಡಂತೆ ಭಾರತವು ಒಟ್ಟು 82 ಪದಕಗಳನ್ನು ಜಯಿಸಿದ್ದು, ಈ ಪೈಕಿ 19 ಚಿನ್ನ, 31 ಬೆಳ್ಳಿ ಹಾಗೂ 32 ಕಂಚಿನ ಪದಕಗಳನ್ನು ಜಯಿಸಿದೆ ಎಂದು livemint.com ವರದಿ ಮಾಡಿದೆ.

ರೋಚಕ ಆರ್ಚರಿ ಫೈನಲ್ ಪಂದ್ಯದಲ್ಲಿ ಚೀನಾ ತೈಪೆಯನ್ನು 230-228 ಅಂಕಗಳ ಅಂತರದಲ್ಲಿ ಪರಾಭವಗೊಳಿಸುವ ಮೂಲಕ ಭಾರತದ ಪದಕಗಳ ಪಟ್ಟಿಗೆ ಮತ್ತೊಂದು ಚಿನ್ನದ ಪದಕವನ್ನು ಸೇರ್ಪಡೆ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News