ಏಶ್ಯನ್ ಗೇಮ್ಸ್ ನಲ್ಲಿ ಮುಂದುವರಿದ ಭಾರತೀಯರ ಪದಕ ಬೇಟೆ; ಶಾಟ್‌ಪುಟ್ ನಲ್ಲಿ ತಜಿಂದರ್‌ಪಾಲ್ ಸಿಂಗ್ ಗೆ ಸ್ವರ್ಣ

Update: 2023-10-01 12:41 GMT

ತಜಿಂದರ್‌ಪಾಲ್ ಸಿಂಗ್ (Photo: X/@SportsArena1234)

ಹಾಂಗ್‌ಝೌ: ಹಾಲಿ ಚಾಂಪಿಯನ್ ಭಾರತದ ತಜಿಂದರ್ ಪಾಲ್ ಸಿಂಗ್ ತೂರ್ ಏಶ್ಯನ್ ಗೇಮ್ಸ್‌ನಲ್ಲಿ ಶಾಟ್‌ಪುಟ್ ಸ್ಪರ್ಧೆಯಲ್ಲಿ ಸ್ವರ್ಣ ಪದಕ ಗೆದ್ದುಕೊಂಡಿದ್ದಾರೆ.

ರವಿವಾರ ನಡೆದ ಪುರುಷರ ಶಾಟ್‌ಪುಟ್ ಫೈನಲ್‌ನಲ್ಲಿ ತನ್ನ ಆರನೇ ಹಾಗೂ ಅಂತಿಮ ಪ್ರಯತ್ನದಲ್ಲಿ ಶಾಟ್‌ಪುಟ್ ಅನ್ನು 20.36 ಮೀ.ದೂರಕ್ಕೆ ಎಸೆದಿರುವ ತಜಿಂದರ್‌ಪಾಲ್ ಮೊದಲ ಸ್ಥಾನಕ್ಕೆ ನೆಗೆದು ಈ ಸಾಧನೆ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News