ಏಶ್ಯನ್ ಗೇಮ್ಸ್ ಶೂಟಿಂಗ್‌ನಲ್ಲಿ ಮತ್ತೆ ಭಾರತೀಯರ ಪದಕ ಬೇಟೆ: ಪಾಲಕ್‌ಗೆ ಚಿನ್ನ, ಇಶಾಗೆ ಬೆಳ್ಳಿ
Update: 2023-09-29 06:21 GMT
ಹ್ಯಾಂಗ್ ಝೌ: ಶುಕ್ರವಾರ ಏಶ್ಯನ್ ಗೇಮ್ಸ್ 2023ರಲ್ಲಿ ಭಾರತದ ಯುವ ಆಟಗಾರ್ತಿಯರಾದ ಪಾಲಕ್ ಗುಲಿಯಾ ಹಾಗೂ ಇಶಾ ಸಿಂಗ್ 10 ಮೀ ಏರ್ ಪಿಸ್ತೂಲ್ ಶೂಟಿಂಗ್ ನಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದು ಬೀಗಿದರು.
ಭಾರತೀಯ ಶೂಟರ್ ಗಳಾದ ಪಾಲಕ್ ಗುಲಿಯಾ ಹಾಗೂ ಇಶಾ ಸಿಂಗ್ ಪೈಪೋಟಿಗೆ ಬಿದ್ದವರಂತೆ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಕೊನೆಗೆ 17 ವರ್ಷದ ಪಾಲಕ್ ಗುಲಿಯಾ ಚಿನ್ನದ ಪದಕ ಜಯಿಸಿದರೆ, ಇಶಾ ಸಿಂಗ್ ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯಿತು.
ಇಶಾ ಸಿಂಗ್ ಗೆ ತೀವ್ರ ಪೈಪೊಟಿ ನೀಡಿದ ಪಾಕಿಸ್ತಾನದ ತಲತ್ ಕಿಶ್ಮಲ ಕಂಚಿನ ಪದಕ ಪಡೆದರು.
ಕಳೆದ ವರ್ಷವಷ್ಟೇ ಅಂತಾರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಗೆ ಕಾಲಿರಿಸಿರುವ ಪಾಲಕ್ ಗುಲಿಯಾಗೆ ಇದು ಪ್ರಪ್ರಥಮ ಪ್ರಮುಖ ಅಂತಾರಾಷ್ಟ್ರೀಯ ಮಟ್ಟದ ವೈಯಕ್ತಿಕ ಪದಕವಾಗಿದೆ.