ಏಶ್ಯನ್ ಗೇಮ್ಸ್, ವಿಶ್ವ ಚಾಂಪಿಯನ್ಶಿಪ್: ಶೂಟರ್ಗಳಾದ ಗನಿಮತ್, ದರ್ಶಾ ಅರ್ಹತೆ

Update: 2023-06-25 18:12 GMT

 ಹೊಸದಿಲ್ಲಿ: ವಿಶ್ವಕಪ್ನಲ್ಲಿ ಭಾರತಕ್ಕೆ ಸ್ಕೀಟ್ನಲ್ಲಿ ಮೊದಲ ಬಾರಿ ಪದಕ ಗೆದ್ದುಕೊಟ್ಟಿರುವ ಶಾಟ್ ಗನ್ ತಜ್ಞೆ ಗನಿಮತ್ ಸೆಖೋನ್ ಹಾಗೂ ದರ್ಶಾ ರಾಥೋರ್ ಅಝರ್ಬೈಜಾನ್ನಲ್ಲಿ ನಡೆಯಲಿರುವ ಐಎಸ್ಎಸ್ಎಫ್ ವಿಶ್ವ ಚಾಂಪಿಯನ್ಶಿಪ್ ಹಾಗೂ ಸೆಪ್ಟಂಬರ್ 23ರಿಂದ ಚೀನಾದಲ್ಲಿ ನಡೆಯಲಿರುವ ಏಶ್ಯನ್ ಗೇಮ್ಸ್ಗಾಗಿ ಸಿದ್ಧಪಡಿಸಿರುವ ಶೂಟರ್ಗಳ ಪ್ರಸ್ತಾವಿತ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಪರಿನಾಝ್ ಧಲಿವಾಲ್ ಅವರು ಎರಡು ಪ್ರಮುಖ ಟೂರ್ನಿಗಳಲ್ಲಿ ಮಹಿಳೆಯರ ವಿಭಾಗದಲ್ಲಿ ಸ್ಥಾನ ಪಡೆದ ಮೂರನೇ ಸ್ಕೀಟ್ ಶೂಟರ್ ಆಗಿದ್ದಾರೆ.

ಗನಿಮತ್ ಜೂನಿಯರ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಪದಕ ಗೆದ್ದಿರುವ ಭಾರತದ ಮೊದಲ ಸ್ಕೀಟ್ ಶೂಟರ್ ಹಾಗೂ ವಿಶ್ವಕಪ್ನಲ್ಲಿ ಕಂಚು ಗೆದ್ದಿರುವ ಮೊದಲ ಶೂಟರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಕಳೆದ ತಿಂಗಳು ಕಝಕ್ಸ್ತಾನದಲ್ಲಿ ನಡೆದ ವಿಶ್ವಕಪ್ನಲ್ಲಿ ಬೆಳ್ಳಿ ಪದಕ ತನ್ನದಾಗಿಸಿಕೊಂಡಿದ್ದರು.

ದರ್ಶಾ ಕಝಕ್ಸ್ತಾನದಲ್ಲಿ ಕಂಚು ಜಯಿಸಿ ಸ್ಮರಣೀಯ ಪ್ರದರ್ಶನ ನೀಡಿದ್ದರು. ಈ ಮೂಲಕ ಭಾರತವು ವಿಶ್ವಕಪ್ನಲ್ಲಿ ಮೊದಲ ಬಾರಿ ಮಹಿಳೆಯರ ಸ್ಕೀಟ್ನಲ್ಲಿ ಸೀನಿಯರ್ ವಿಭಾಗದಲ್ಲಿ ಎರಡು ವೈಯಕ್ತಿಕ ಪದಕವನ್ನು ಗೆದ್ದುಕೊಂಡಿತ್ತು.

ಏಶ್ಯನ್ ಗೇಮ್ಸ್ ಹಾಗೂ ವಿಶ್ವ ಚಾಂಪಿಯನ್ಶಿಪ್ನ ಪುರುಷರ ಸ್ಕೀಟ್ ತಂಡದಲ್ಲಿ 2014ರ ಏಶ್ಯನ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ವಿಜೇತ (ಜೂನಿಯರ್ ವಿಭಾಗ)ಅನಂತಜೀತ್ ಸಿಂಗ್ ನರುಕಾ, ಅಂಗದ್ ವೀರ್ ಸಿಂಗ್ ಬಾಜ್ವಾ ಹಾಗೂ ಗುರ್ಜೋತ್ ಸಿಂಗ್ ಅವರಿದ್ದಾರೆ.

ಭಾರತದ ಹಿರಿಯ ಸ್ಕೀಟ್ ಶೂಟರ್, ಒಲಿಂಪಿಯನ್ ಹಾಗೂ ಹಲವು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿರುವ ಮೈರಾಜ್ ಅಹ್ಮದ್ ಖಾನ್ ಎರಡೂ ಸ್ಪರ್ಧಾವಳಿಗಳಲ್ಲಿ ಸ್ಥಾನ ಪಡೆದಿಲ್ಲ.

ಪುರುಷರ ಟ್ರ್ಯಾಪ್ ವಿಭಾಗದಲ್ಲಿ ಪೃಥ್ವಿರಾಜ್

ಟೊಂಡೈಮಾಲ್, ಹಿರಿಯ ಶೂಟರ್ ರೆರಾವರ್ ಸಿಂಗ್ ಸಂಧು ಹಾಗೂ ಒಲಿಂಪಿಯನ್ ಕಿನನ್ ಚೆನೈ ಅವರಿದ್ದಾರೆ. 2006ರ ವಿಶ್ವ ಚಾಂಪಿಯನ್ ಮಾನವ್ಜೀತ್ ಸಿಂಗ್ ಸಂಧು ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾದರು.

ತಮಿಳುನಾಡಿನ ಪೃಥ್ವಿರಾಜ್ ಇತ್ತೀಚೆಗೆ ಭೋಪಾಲ್ನಲ್ಲಿ ಶಾಟ್ಗನ್ಗಾಗಿ ನಡೆದಿದ್ದ ನಾಲ್ಕನೇ ನ್ಯಾಶನಲ್ ಆಯ್ಕೆ ಟ್ರಯಲ್ಸ್ ನಲ್ಲಿ ವಿಜಯಿ ಆಗಿ ಹೊರಹೊಮ್ಮಿದ್ದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News