ಚೆಪಾಕ್ ನಲ್ಲಿ ನಡೆಯುತ್ತಿದೆ ಸ್ಪಿನ್ ಬೌಲರ್ ಗಳ ಆಟ

ತೀವ್ರ ಕುಸಿತ ಕಾಣುತ್ತಿರುವ ಆಸ್ಟ್ರೇಲಿಯಾ – 165/8

Update: 2023-10-08 11:58 GMT

Photo: cricketworldcup.com

ಚೆನ್ನೈ: ಇಲ್ಲಿನ ಚೆಪಾಕ್ ಸ್ಟೇಡಿಯಂನಲ್ಲಿ ಏಕದಿನ ವಿಶ್ವಕಪ್ ನ ಕ್ರಿಕೆಟ್  ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುತ್ತಿರುವ ಪಂದ್ಯದಲ್ಲಿ ಸ್ಪಿನ್ ಬೌಲರ್ ಗಳ ಆಟವೇ ನಡೆಯುತ್ತಿದೆ. ಭಾರತದ ಸ್ಪಿನ್ ದಾಳಿಯನ್ನು ಅರ್ಥ ಮಾಡಿಕೊಳ್ಳಲು ಹೆಣಗಾಡುತ್ತಿರುವ ಆಸ್ಟ್ರೇಲಿಯಾ ತೀವ್ರ ಕುಸಿತ ಕಂಡಿದೆ. ಕಳೆದ 16 ಓವರ್ ನಲ್ಲಿ ಕೇವಲ 54 ರನ್ ಗಳಿಸಿದೆ.

ಚೆಪಾಕ್ ಸ್ಪಿನ್ ಬಾಲಿಂಗ್ ಗೆ ಹೆಸರುವಾಸಿ. ಇವತ್ತಿನ ಪಂದ್ಯದಲ್ಲಿ ಟಾಸ್ ಸೋತು ಫೀಲ್ಡಿಂಗ್ ಗೆ ಇಳಿದ ಭಾರತ ತಂಡದ ಸ್ಪಿನ್ನರ್ ಗಳು ಪಿಚ್ ಗೆ ಪೂರಕವಾಗಿ ಬೌಲಿಂಗ್ ಮಾಡಿ ಆಸ್ಟ್ರೇಲಿಯಾ ಬ್ಯಾಟರ್ ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಇಂದಿನ ಪಂದ್ಯದಲ್ಲಿ ವಿಕೆಟ್ ಗಳಿಕೆಯಲ್ಲಿ ಸ್ಪಿನರ್ ಗಳ ಪಾತ್ರ ಹೆಚ್ಚಿರುವುದು ಇದಕ್ಕೆ ಸಾಕ್ಷಿ. ರವೀಂದ್ರ ಜಡೇಜಾ 3 ವಿಕೆಟ್, ಕುಲ್ ದೀಪ್ ಯಾದವ್ 2 ವಿಕೆಟ್, ಆರ್. ಅಶ್ವಿನ್ ಒಂದು ಓವರ್ ಮೇಡನ್ ಮಾಡಿ 1 ವಿಕೆಟ್ ಪಡೆದಿದ್ದಾರೆ. ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ 2 ವಿಕೆಟ್ ಪಡೆದಿದ್ದಾರೆ.

ಈಗಾಗಲೇ 43.1 ಓವರ್ ಮುಗಿದಿದ್ದು8 ವಿಕೆಟ್ ಕಳೆದುಕೊಂಡಿರುವ ಆಸ್ಟ್ರೇಲಿಯಾ ತಂಡದ  ಆಡಂ ಝಂಪಾ 3, ಮಿಷೆಲ್ ಸ್ಟಾರ್ಕ್ 6 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. 46 ಗಳಿಸಿ ಔಟ್ ಆದ ಸ್ಟೀವ್ ಸ್ಮಿತ್, 41 ರನ್ ಗಳಿಸಿದ ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ಪರ ಅಧಿಕ ರನ್ ಗಳಿಸಿದ ಬ್ಯಾಟರ್ ಗಳು. ಭರವಸೆಯ ಆಟಗಾರ ಕ್ಯಾಮರೂನ್ ಗ್ರೀನ್ ಒಂದಂಕಿ ದಾಟಲಿಲ್ಲ. ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ 15 ಗಳಿಸಿ ಔಟ್‌ ಆದರು. ಅಲೆಕ್ಸ್ ಅಲೆಕ್ಸ್ ಕ್ಯಾರಿ, ಮಿಷೆಲ್ ಮಾರ್ಷ್ ಸೊನ್ನೆ ಸುತ್ತಿ ಪೆವಲಿಯನ್ ಹಾದಿ ಹಿಡಿದದ್ದು ಆಸ್ಟ್ರೇಲಿಯಾ ರನ್ ಗಳಿಕೆ ಹಿನ್ನಡೆಗೆ ಕಾರಣವಾಯ್ತು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News