ದ್ವಿತೀಯ ಟೆಸ್ಟ್ ನಲ್ಲಿ ತಲೆನೋವಾದ ʼಹೆಡ್ʼ | ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ 10 ವಿಕೆಟ್ ಗಳ ಸೋಲು

Update: 2024-12-08 07:19 GMT

Photo : x/@ICC

ಅಡಿಲೇಡ್ : ದ್ವಿತೀಯ ಇನ್ನಿಂಗ್ಸ್ ನಲ್ಲಿ ಭಾರತ ನೀಡಿದ 19 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯ ತಂಡವು 10 ವಿಕೆಟ್ ಗಳಿಂದ ಸೋಲಿಸಿ, ಐದು ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ.

ಪಿಂಕ್‌ ಬಾಲ್‌ ಟೆಸ್ಟ್‌ನ ದ್ವಿತೀಯ ಇನ್ನಿಂಗ್ಸ್ ನ ಮೊದಲ ಇನ್ನಿಂಗ್ಸ್ ನಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಟ್ರಾವಿಸ್ ಹೆಡ್, ಭಾರತ ತಂಡದಿಂದ ಪಂದ್ಯವನ್ನು ಕಸಿದುಕೊಂಡರು. ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ 8ನೇ ಶತಕವನ್ನು ಸಿಡಿಸಿದ ಹೆಡ್ ಅವರು ಪಂದ್ಯವನ್ನು ಭಾರತದ ಕೈಯಿಂದ ಸೆಳೆದರು. ಭಾರತದ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದ ಹೆಡ್ ಅವರು ಕೇವಲ 111 ಎಸೆತಗಳಲ್ಲಿ ಶತಕ ಪೂರೈಸಿದರು. ಆಸ್ಟ್ರೇಲಿಯದ ಮೊದಲ ಇನಿಂಗ್ಸ್‌ನ ವೇಳೆ ಹೆಡ್ ಅವರು 99.29ರ ಸ್ಟ್ರೈಕ್‌ರೇಟ್‌ನಲ್ಲಿ 141 ಎಸೆತಗಳಲ್ಲಿ 17 ಬೌಂಡರಿ, 4 ಸಿಕ್ಸರ್‌ಗಳ ನೆರವಿನಿಂದ 140 ರನ್ ಗಳಿಸಿದರು.

ರವಿವಾರ ಆಸ್ಟ್ರೇಲಿಯ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತವನ್ನು 175 ರನ್‌ಗಳಿಗೆ ಆಲೌಟ್ ಮಾಡಿತು. 19 ರನ್ ಗಳ ಬೆನ್ನಟ್ಟಿದ ಆಸ್ಟ್ರೇಲಿಯ ತಂಡದ ಪರವಾಗಿ ಉಸ್ಮಾನ್ ಖ್ವಾಜಾ ಔಟಾಗದೆ 9 ಮತ್ತು ನಾಥನ್ ಮೆಕ್‌ಸ್ವೀನಿ ಔಟಾಗದೆ 10 ರನ್ ಗಳಿಸಿ ಸಾಧಾರಣ ಗುರಿಯನ್ನು ಕೇವಲ 3.2 ಓವರ್‌ಗಳಲ್ಲಿ ಬೆನ್ನಟ್ಟಿ ಗೆಲುವಿನ ರೂವಾರಿಯಾದರು.

ಪರ್ತ್‌ನಲ್ಲಿ ನಡೆದ ಸರಣಿಯ ಆರಂಭಿಕ ಪಂದ್ಯದಲ್ಲಿ ಭಾರತವು 295 ರನ್‌ಗಳಿಂದ ಜಯ ಸಾಧಿಸಿತ್ತು. ಆದರೆ ಅಡಿಲೇಡ್‌ನಲ್ಲಿ ಟ್ರಾವೆಸ್ ಹೆಡ್ ಅವರ ಪ್ರದರ್ಶನದ ಮುಂದೆ ಭಾರತ ತಂಡವು ವಿಫಲವಾಯಿತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News