ಅಫ್ಘಾನ್ ದಾಳಿಗೆ 6 ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯ

Update: 2023-11-07 14:30 GMT

Photo: Twitter

ಮುಂಬೈ: ಇಲ್ಲಿನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಯಲ್ಲಿ ಅಫ್ಘಾನಿಸ್ತಾನ ನೀಡಿದ ಗುರಿ ಬೆನ್ನತ್ತಿದ ಆಸ್ಟ್ರೇಲಿಯ ತಂಡಕ್ಕೆ ನವೀನ್ ಹಾಗೂ ಅಝ್ಮತುಲ್ಲಾ ಜೋಡಿ ಆರಂಭಿಕ ಆಘಾತ ನೀಡಿದ್ದಾರೆ.

ಅಫ್ಘಾನಿಸ್ತಾನ ನೀಡಿದ ಕಠಿಣ ಗುರಿ ಬೆನ್ನಟ್ಟುವಲ್ಲಿ ಎಡವಿದ ಆಸೀಸ್ ಬ್ಯಾಟರ್ ಗಳು 8.2 ಓವರ್ ಒಳಗಡೆಯೇ ಹಳಿತಪ್ಪಿದರು. ಅಫ್ಘಾನ್ ಜೋಡಿ ದಾಳಿಗೆ ಬೆದರಿದ ಆಸ್ಟ್ರೇಲಿಯ ಓಪನರ್ ವಾರ್ನರ್ 18 ಹಾಗೂ ಜೋಸ್ ಇಂಗ್ಲಿಸ್ ಶೂನ್ಯಕ್ಕೆ ಅಝ್ಮತುಲ್ಲಾಗೆ ವಿಕೆಟ್ ಒಪ್ಪಿಸಿದರೆ, ಟ್ರಾವಿಸ್ ಹೆಡ್ , ಮಿಷೆಲ್ ಮಾರ್ಶ್ ಕ್ರಮವಾಗಿ 0, 24 ಕ್ಕೆ ನವೀನ್ ಉಲ್ ಹಕ್ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. 14 ರನ್ ಗಳಿಸಿದ್ದಾಗ ರಹ್ಮತುಲ್ಲಾ ಅದ್ಭುತ ರನೌಟ್ ಗೆ ಮಾರ್ನಸ್ ಲಬುಶೇನ್ ಬಲಿಯಾದರು. 6 ರನ್ ಗಳಿಸಿದ್ದಾಗ ಮಾರ್ಕಸ್ ಸ್ಟೋಯಿನಿಶ್ ರಶೀದ್ ಖಾನ್ ಎಲ್ ಬಿ ಡಬ್ಲ್ಯೂ ಬಲೆಗೆ ಬಿದ್ದರು

ಆಸ್ಟ್ರೇಲಿಯ 16.4 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 87 ರನ್ ಬಾರಿಸಿದೆ. ಗೆಲುವಿಗೆ 33.2 ಓವರ್ ಗಳಲ್ಲಿ 205 ರನ್ ಅಗತ್ಯವಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News