ಕೊನೆಯ 108 ರನ್ ಗೆ ಆಸ್ಟ್ರೇಲಿಯದ 9 ವಿಕೆಟ್ ಪತನ!
ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿ ಪಾಕಿಸ್ತಾನ ವಿರುದ್ಧ 33.5 ಓವರ್ ಗಳಲ್ಲಿ 259 ಬೃಹತ್ ಮೊತ್ತದ ಆರಂಭಿಕ ಜೊತೆಯಾಟದ ಹೊರತಾಗಿಯೂ ಉಳಿದ 16.1 ಓವರ್ ಗಳಲ್ಲಿ 108 ರನ್ ಗೆ ಅಸ್ಟ್ರೇಲಿಯಾ 8 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು.
ಅಸ್ಟ್ರೇಲಿಯಾ ನಿಗದಿತ 50 ಓವರ್ ಗಳಲ್ಲಿ ಡೇವಿಡ್ ವಾರ್ನರ್ ಹಾಗೂ ಮಿಷೆಲ್ ಮಾರ್ಷ್ ಶತಕದ ನೆರವಿನಂದ 367 ರನ್ ಪೇರಿಸಿತು. ಮೊದಲ ವಿಕೆಟ್ ಗೆ 259 ರನ್ ಗಳ ಜೊತೆಯಾಟ ನೀಡಿದ ಡೇವಿಡ್ ವಾರ್ನರ್ 163 ರನ್ ಗಳಿಸಿದರೆ ಮಿಷೆಲ್ ಮಾರ್ಷ್ 121 ರನ್ ಬಾರಿದರು. ಕ್ರಮವಾಗಿ ಹಾರಿಸ್ ರವೂಫ್ ಹಾಗೂ ಶಾಹೀನ್ ಶಾ ಅಫ್ರಿದಿ ಗೆ ವಿಕೆಟ್ ಒಪ್ಪಿಸಿದರು. ಬಳಿಕ ಬ್ಯಾಟಿಂಗ್ ಬಂದ ಗ್ಲೇನ್ ಮಾಕ್ಸ್ ವೆಲ್ ಶೂನ್ಯಕ್ಕೆ ಶಾಹೀನ್ ಆಫ್ರಿದಿ ಗೆ ವಿಕೆಟ್ ಒಪ್ಪಿಸಿದರೆ ಸ್ಟೀವನ್ ಸ್ಮಿತ್ 7 ರನ್ ಗೆ ಕಾಟ್ ಅಂಡ್ ಬೌಲ್ಡ್ ಆದರು. ಜೋಸ್ ಇಂಗ್ಲಿಸ್ 13, ಮಾರ್ಕಸ್ ಸ್ಟೋನಿಸ್ 21, ಮಾರ್ನಸ್ ಲಬುಶೇನ್ 8, ಸ್ಟಾರ್ಕ್ 2, ಹೇಝಲ್ ವುಡ್ ಶೂನ್ಯಕ್ಕೆ ಪೆವಿಲಿಯನ್ ದಾರಿ ಹಿಡಿದರು. ಪರಿಣಾಮ ಕೇವಲ ಉಳಿದ 16.1 ಓವರ್ ಗಳಲ್ಲಿ ಅಸ್ಟ್ರೇಲಿಯಾ 9 ಕಳೆದುಕೊಂಡಿತು.
ಆಸ್ಟ್ರೇಲಿಯಾದ ವಿಕೆಟ್ ಪತನ : 259-1 (ಮಿಷೆಲ್ ಮಾರ್ಷ್), 259-2 (ಗ್ಲೆನ್ ಮ್ಯಾಕ್ಸ್ ವೆಲ್), 284-3(ಸ್ಟೀವನ್ ಸ್ಮಿತ್), 325-4(ಡೇವಿಡ್ ವಾರ್ನರ್), 339-5(ಜೋಸ್ ಇಂಗ್ಲಿಸ್), 354-6(ಮಾರ್ಕಸ್ ಸ್ಟೋನಿಸ್), 360-7(ಮಾರ್ನಸ್ ಲಬುಶೇನ್), 363-8(ಮಿಷೆಲ್ ಸ್ಟಾರ್ಕ್), 363-9(ಜೋಶ್ ಹೇಝಲ್ ವುಡ್)