ಯುರೋಪಿಯನ್ ಚಾಂಪಿಯನ್‌ಶಿಪ್ 2024ಕ್ಕೆ ಆಸ್ಟ್ರೀಯ ಅರ್ಹತೆ

Update: 2023-10-17 16:42 GMT

Photo: twitter/EURO2024

ಹೊಸದಿಲ್ಲಿ: ಬಾಕುವಿನಲ್ಲಿ ಸೋಮವಾರ ಅಝರ್‌ಬೈಜಾನ್ ವಿರುದ್ಧ 1-0 ಅಂತರದಿಂದ ಗೆಲುವು ದಾಖಲಿಸಿರುವ ಆಸ್ಟ್ರೀಯ ತಂಡ ಯುರೋ 2024ರ ಟೂರ್ನಿಯಲ್ಲಿ ತನ್ನ ಸ್ಥಾನ ಗಿಟ್ಟಿಸಿಕೊಂಡಿದೆ. ಗ್ರೂಪ್ ಎಫ್‌ನಲ್ಲಿ ಮೊದಲೆರಡು ಸ್ಥಾನ ಪಡೆಯುವುದನ್ನು ಖಚಿತಪಡಿಸಿಕೊಂಡಿದೆ.

ಬದಲಿ ಆಟಗಾರನಾಗಿ ಕಣಕ್ಕಿಳಿದಿದ್ದ ಮಿಡ್ ಫೀಲ್ಡರ್ ಮಾರ್ಸೆಲ್ ಸಬಿಟ್ಝರ್ 48ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸಿದರು. ಈ ಗೆಲುವಿನ ಮೂಲಕ ಆಸ್ಟ್ರೀಯ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಸತತ ಮೂರನೇ ಬಾರಿ ಸ್ಥಾನ ಪಡೆದುಕೊಂಡಿದೆ.

ಇತ್ತೀಚೆಗೆ ಸ್ವದೇಶದಲ್ಲಿ ಬೆಲ್ಜಿಯಮ್ ವಿರುದ್ಧ 2-3 ಅಂತರದಿಂದ ಸೋಲುಂಡಿದ್ದರೂ ಕೂಡ ಆಸ್ಟ್ರೀಯ ತಂಡ ಮುಂದಿನ ವರ್ಷ ಜರ್ಮನಿಯಲ್ಲಿ ನಡೆಯಲಿರುವ 24 ತಂಡಗಳು ಭಾಗವಹಿಸುವ ಟೂರ್ನಮೆಂಟ್‌ನಲ್ಲಿ ಅರ್ಹತೆ ಪಡೆದಿರುವ 8 ತಂಡಗಳ ಪೈಕಿ ಒಂದಾಗಿದೆ.

ಸಬಿಟ್ಝರ್ ಅರ್ಹತಾ ಟೂರ್ನಿಯಲ್ಲಿ ಗಳಿಸಿರುವ ನಾಲ್ಕನೇ ಗೋಲು ಇದಾಗಿದೆ. ನಾಲ್ಕು ದಿನಗಳಲ್ಲಿ ಸತತ ಎರಡನೇ ಸ್ಪಾಟ್ ಕಿಕ್ ಗಳಿಸಿದರು.

7 ಪಂದ್ಯಗಳಲ್ಲಿ ಐದನೇ ಗೆಲುವು ದಾಖಲಿಸಿರುವ ಆಸ್ಟ್ರೀಯ ಇದೀಗ ಮೂರನೇ ಸ್ಥಾನದಲ್ಲಿರುವ ಸ್ವೀಡನ್‌ಗಿಂತ 10 ಅಂಕದಿಂದ ಮುಂದಿದೆ.

ಒಟ್ಟು 16 ಅಂಕದೊಂದಿಗೆ ಬೆಲ್ಜಿಯಮ್‌ನೊಂದಿಗೆ ಟೈ ಸಾಧಿಸಿರುವ ಆಸ್ಟ್ರೀಯ ತಂಡ ಇನ್ನೊಂದು ಪಂದ್ಯವನ್ನು ಮುಂದಿನ ತಿಂಗಳು ಎಸ್ಟೋನಿಯ ವಿರುದ್ಧ ಆಡಲಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News