ಪ್ಯಾರಿಸ್ ಒಲಿಂಪಿಕ್ಸ್‌ ಬ್ಯಾಡ್ಮಿಂಟನ್ | ಸೆಮಿ ಫೈನಲ್ ನಲ್ಲಿ ಸೋತ ಲಕ್ಷ್ಯ ಸೇನ್

Update: 2024-08-04 13:05 GMT

ಲಕ್ಷ್ಯ ಸೇನ್ | PC : PTI 

ಪ್ಯಾರಿಸ್ : ಇಲ್ಲಿ ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ ನಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಲಕ್ಷ್ಯ ಸೇನ್ ಅವರು ಹಾಲಿ ಚಾಂಪಿಯನ್ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ ನೇರ ಸೆಟ್ ಗಳಿಂದ ಸೋಲು ಅನುಭವಿಸಿದರು. ಆ ಮೂಲಕ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ನಲ್ಲಿ ಭಾರತದ ಮೊದಲ ಚಿನ್ನದ ಕನಸು ಗೆಲ್ಲುವ ಕನಸು ನುಚ್ಚುನೂರಾಯಿತು.

54 ನಿಮಿಷಗಳ ಸೆಮಿಫೈನಲ್ ಹಣಾಹಣಿಯಲ್ಲಿ ವಿಶ್ವ ಚಾಂಪಿಯನ್‌ಶಿಪ್‌ ನಲ್ಲಿ ಕಂಚಿನ ಪದಕ ವಿಜೇತ ಅಲ್ಮೋರಾದ 22 ವರ್ಷದ ಆಟಗಾರ ಲಕ್ಷ್ಯ ಸೇನ್, 20-22 14-21 ರಿಂದ ಎರಡು ಬಾರಿ ವಿಶ್ವ ಚಾಂಪಿಯನ್ ಆಕ್ಸೆಲ್ಸೆನ್‌ ಗೆ ಶರಣಾದರು. ಆದರೂ ಲಕ್ಷ್ಯ ಗೆ ಕಂಚಿನ ಪದಕ ಗೆಲ್ಲುವ ಇನ್ನೊಂದು ಅವಕಾಶವಿದೆ. ಅವರು ಮಲೇಷ್ಯಾದ ಲೀ ಜಿ ಜಿಯಾ ಅವರನ್ನು ಕಂಚಿನ ಪದಕಕ್ಕಾಗಿನ ಪಂದ್ಯದಲ್ಲಿ ಎದುರಿಸಲಿದ್ದಾರೆ. ಆ ಪಂದ್ಯದಲ್ಲಿ ಜಯಗಳಿಸಿದರೆ ಸೇನ್ ಅವರು ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಪುರುಷ ಷಟ್ಲರ್ ಆಗಲಿದ್ದಾರೆ.

ರಿಯೊ ಮತ್ತು ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪಿವಿ ಸಿಂಧು ಬೆಳ್ಳಿ ಮತ್ತು ಕಂಚು ಮತ್ತು ಲಂಡನ್ ಒಲಿಂಪಿಕ್ಸ್ ನಲ್ಲಿ ಸೈನಾ ನೆಹ್ವಾಲ್ ಕಂಚಿನ ಪದಕವನ್ನು ಗಳಿಸಿವುರುವುದು ಒಲಿಂಪಿಕ್ ಅಂಗಳದಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರರ ಸಾಧನೆಯಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News