ದುಲೀಪ್ ಟ್ರೋಫಿಗೆ ತಂಡಗಳನ್ನು ಪ್ರಕಟಿಸಿದ ಬಿಸಿಸಿಐ | ಟೂರ್ನಿ ಆಡಲು ಗಿಲ್, ಪಂತ್, ರಾಹುಲ್, ಜಡೇಜ ಸಜ್ಜು
ಹೊಸದಿಲ್ಲಿ : ಬೆಂಗಳೂರಿನಲ್ಲಿ ಸೆಪ್ಟಂಬರ್ 5ರಿಂದ ಆರಂಭವಾಗಲಿರುವ ಮುಂಬರುವ ದುಲೀಪ್ ಟ್ರೋಫಿಗೆ ಬಿಸಿಸಿಐ ಆಯ್ಕೆಗಾರರು ಬುಧವಾರ ತಂಡಗಳನ್ನು ಪ್ರಕಟಿಸಿದ್ದಾರೆ.
ನಾಯಕ ರೋಹಿತ್ ಶರ್ಮಾ, ಅಗ್ರ ಸರದಿಯ ಬ್ಯಾಟರ್ ವಿರಾಟ್ ಕೊಹ್ಲಿ, ಪ್ರಮುಖ ವೇಗಿ ಜಸ್‌ಪ್ರಿತ್ ಬುಮ್ರಾ ಹಾಗೂ ಹಿರಿಯ ಸ್ಪಿನ್ನರ್ ಆರ್.ಅಶ್ವಿನ್‌ಗೆ ಪಂದ್ಯಾವಳಿ ಆಡುವುದರಿಂದ ರಿಯಾಯಿತಿ ನೀಡಿರುವ ಆಯ್ಕೆ ಸಮಿತಿಯು ಅನುಭವಿ ದೇಶೀಯ ಆಟಗಾರರು ಹಾಗೂ ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶ ನೀಡಿ ತಂಡದಲ್ಲಿ ಸಮತೋಲನ ಕಾಯ್ದುಕೊಂಡಿದೆ.
ಅಂತರರಾಷ್ಟ್ರೀಯ ಸ್ಟಾರ್‌ಗಳಾದ ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಆಲ್ ರೌಂಡರ್‌ಗಳಾದ ರವೀಂದ್ರ ಜಡೇಜ ಹಾಗೂ ಅಕ್ಷರ್ ಪಟೇಲ್, ಸ್ಪಿನ್ನರ್ ಕುಲದೀಪ್ ಯಾದವ್ ಹಾಗೂ ವೇಗದ ಬೌಲರ್ ಮುಹಮ್ಮದ್ ಸಿರಾಜ್‌ಗೆ ಈ ಪಂದ್ಯಾವಳಿಯಲ್ಲಿ ಆಡಲಿದ್ದಾರೆ.
ಭಾರತದ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿರುವ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ದುಲೀಪ್ ಟ್ರೋಫಿಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಬಿಸಿಸಿಐ ಕೇಂದ್ರೀಯ ಗುತ್ತಿಗೆಯಿಂದ ಹೊರಗುಳಿದಿದ್ದ ಇನ್ನೋರ್ವ ವಿಕೆಟ್‌ಕೀಪರ್ ಇಶಾನ್ ಕಿಶನ್ ಕೂಡ ಪುನರಾಗಮನ ಮಾಡಲಿದ್ದಾರೆ.
►ಮೊದಲ ಸುತ್ತಿನ ಪಂದ್ಯಾವಳಿಗೆ 4 ತಂಡಗಳು
ಟೀಮ್ ಎ: ಶುಭಮನ್ ಗಿಲ್(ನಾಯಕ), ಮಯಾಂಕ್ ಅಗರ್ವಾಲ್, ರಿಯಾನ್ ಪರಾಗ್, ಧ್ರುವ್ ಜುರೆಲ್, ಕೆ.ಎಲ್.ರಾಹುಲ್, ತಿಲಕ್ ವರ್ಮಾ, ಶಿವಂ ದುಬೆ, ತನುಶ್ ಕೋಟ್ಯಾನ್, ಕುಲದೀಪ್ ಯಾದವ್, ಆಕಾಶ್ ದೀಪ್, ಪ್ರಸಿದ್ಧ ಕೃಷ್ಣ, ಖಲೀಲ್ ಅಹ್ಮದ್, ಅವೇಶ್ ಖಾನ್, ವಿದ್ವತ್ ಕಾವೇರಪ್ಪ, ಕುಮಾರ ಕುಶಾಗ್ರ, ಶಾಶ್ವತ್ ರಾವತ್.
ಟೀಮ್ ಬಿ : ಅಭಿಮನ್ಯು ಈಶ್ವರನ್(ನಾಯಕ), ಯಶಸ್ವಿ ಜೈಸ್ವಾಲ್, ಸರ್ಫರಾಝ್ ಖಾನ್, ರಿಷಭ್ ಪಂತ್, ಮುಶೀರ್ ಖಾನ್, ನಿತಿಶ್ ಕುಮಾರ್ ರೆಡ್ಡಿ, ವಾಶಿಂಗ್ಟನ್ ಸುಂದರ್, ರವೀಂದ್ರ ಜಡೇಜ,ಮುಹಮ್ಮದ್ ಸಿರಾಜ್, ಯಶ್ ದಯಾಳ್, ಮುಕೇಶ್ ಕುಮಾರ್, ರಾಹುಲ್ ಚಹಾರ್, ಆರ್.ಸಾಯಿ ಕಿಶೋರ್, ಮೋಹಿತ್ ಅವಸ್ಥಿ, ಜಗದೀಶನ್(ವಿ.ಕೀ).
ಟೀಮ್ ಸಿ: ಋತುರಾಜ್ ಗಾಯಕ್ವಾಡ್(ನಾಯಕ), ಸಾಯಿ ಸುದರ್ಶನ್, ರಜತ್ ಪಾಟಿದಾರ್, ಅಭಿಷೇಕ್ ಪೊರೆಲ್, ಸೂರ್ಯಕುಮಾರ್ ಯಾದವ್, ಬಿ.ಇಂದ್ರಜಿತ್, ಹೃತಿಕ್ ಶೋಕೀನ್, ಮಾನವ್ ಸುಥರ್, ಉಮ್ರಾನ್ ಮಲಿಕ್, ವಿ.ವಿಜಯಕುಮಾರ್, ಅನ್ಶುಲ್ ಖಂಬೋಜ್, ಹಿಮಾಂಶು ಚೌಹಾಣ್, ಮಯಾಂಕ್ ಮರ್ಕಂಡೆ, ಆರ್ಯನ್ ಜುಯಲ್, ಸಂದೀಪ್ ವಾರಿಯರ್.
ಟೀಮ್ ಡಿ: ಶ್ರೇಯಸ್ ಅಯ್ಯರ್(ನಾಯಕ), ಅಥರ್ವ ಟೈಡ್, ಯಶ್ ದುಬೆ, ದೇವದತ್ತ ಪಡಿಕ್ಕಲ್, ಇಶಾನ್ ಕಿಶನ್(ವಿ.ಕೀ.), ರಿಕಿ ಭುಯ್, ಸರನ್ಶ್ ಜೈನ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಆದಿತ್ಯ ಠಾಕ್ರೆ , ಹರ್ಷಿತ್ ರಾಣಾ, ತುಷಾರ್ ದೇಶಪಾಂಡೆ, ಆಕಾಶ್ ಸೇನ್‌ಗುಪ್ತಾ, ಕೆ.ಎಸ್. ಭರತ್(ವಿ.ಕೀ.), ಸೌರಭ್ ಕುಮಾರ್.