ಮಹಿಳೆಯರ ಟಿ20 ವಿಶ್ವಕಪ್‌ಗೆ ಭಾರತ ಆತಿಥ್ಯ ಸಾಧ್ಯತೆ ನಿರಾಕರಿಸಿದ ಬಿಸಿಸಿಐ

Update: 2024-08-15 16:11 GMT

PC : BCCI 

ಹೊಸದಿಲ್ಲಿ: ಬಾಂಗ್ಲಾದೇಶದಲ್ಲಿ ಈ ವರ್ಷದ ಅಕ್ಟೋಬರ್‌ನಲ್ಲಿ ಮಹಿಳೆಯರ ಟಿ20 ವಿಶ್ವಕಪ್ ಆಯೋಜಿಸಲಾಗಿದ್ದು, ಆ ದೇಶದಲ್ಲಿನ ರಾಜಕೀಯ ಅಶಾಂತಿಯು ಭದ್ರತಾ ಕಳವಳವನ್ನು ಹೆಚ್ಚಿಸಿದೆ. ಅಗತ್ಯವಿದ್ದಲ್ಲಿ ಬೇರೆಡೆ ಪಂದ್ಯಾವಳಿಯನ್ನು ಆಯೋಜಿಸಲು ಚಿಂತನೆ ನಡೆಸಲಾಗುತ್ತಿದೆ. ಭಾರತವು ಪಂದ್ಯಾವಳಿಯನ್ನು ಆಯೋಜಿಸುವ ಯಾವುದೇ ಸಾಧ್ಯತೆಯನ್ನು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಸಾರಾಸಗಟಾಗಿ ತಿರಸ್ಕರಿಸಿದೆ.

ಮಹಿಳೆಯರ ಟಿ20 ವಿಶ್ವಕಪ್ ಆಯೋಜಿಸಬಹುದೇ ಎಂದು ಬಿಸಿಸಿಐಗೆ ಅವರು ಕೇಳಿದ್ದರು. ಆದರೆ ನಾನು ಸಾರಸಗಟಾಗಿ ನಿರಾಕರಿಸಿದೆ. ಈ ವರ್ಷದ ಅಕ್ಟೋಬರ್ ತನಕ ಮಾನ್ಸೂನ್ ಋತು ಇರುತ್ತದೆ. ಮುಂದಿನ ವರ್ಷ ವನಿತೆಯರ ಏಕದಿನ ವಿಶ್ವಕಪ್ ಆತಿಥ್ಯ ವಹಿಸಲಿದ್ದೇವೆ. ಸತತ ಎರಡು ವಿಶ್ವಕಪ್‌ಗಳನ್ನು ಆಯೋಜಿಸಲು ಬಯಸುತ್ತೇನೆ ಎಂದು ನಾನು ಹೇಳಲಾರೆ ಎಂದು ಶಾ ಹೇಳಿದ್ದಾರೆ.

ಹೊಸ ಅತ್ಯಾಧುನಿಕ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಬಿ)ಸೆಪ್ಟಂಬರ್‌ನಲ್ಲಿ ಬೆಂಗಳೂರಿನ ಹೊರವಲಯದಲ್ಲಿ ಉದ್ಘಾಟನೆಯಾಗಲಿದೆ. ಇದು ದೇಶದ ಒಲಿಂಪಿಕ್ಸ್ ಅಥ್ಲೀಟ್‌ಗಳಿಗೂ ಲಭ್ಯವಾಗಲಿದೆ ಎಂದು ಶಾ ಪ್ರಕಟಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News