ಐಪಿಎಲ್ 2024 ಪ್ರಾರಂಭಕ್ಕೂ ಮುನ್ನ ಕುತೂಹಲ ಮೂಡಿಸಿದ ಎಂ.ಎಸ್. ಧೋನಿ ಫೇಸ್ ಬುಕ್ ಪೋಸ್ಟ್

Update: 2024-03-05 08:43 GMT

ಎಂ.ಎಸ್.ಧೋನಿ | Photo: PTI 

ಹೊಸದಿಲ್ಲಿ: ಐಪಿಎಲ್ 2024 ಪ್ರಾರಂಭಕ್ಕೆ ಇನ್ನು ಕೆಲವೇ ವಾರಗಳು ಬಾಕಿ ಇರುವಾಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್.ಧೋನಿಯ ಇತ್ತೀಚಿನ ಪೋಸ್ಟ್ ಅವರ ಅಭಿಮಾನಿಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಐಪಿಎಲ್ 2024 ಋತುವಿನ ಪ್ರಥಮ ಪಂದ್ಯದ ಪ್ರಾರಂಭಕ್ಕೆ ಇನ್ನು ಎರಡು ವಾರ ಮಾತ್ರ ಬಾಕಿ ಇರುವಾಗ ಮಾರ್ಚ್ 4ರಂದು ಫೇಸ್ ಬುಕ್ ಪೋಸ್ಟ್ ಮಾಡಿರುವ ಎಂ.ಎಸ್.ಧೋನಿ, “ಹೊಸ ಋತುವಿನ ಹೊಸ ಪಾತ್ರಕ್ಕೆ ಕಾಯಲಾಗುತ್ತಿಲ್ಲ. ನಿರೀಕ್ಷಿಸಿ!” ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ. ಆದರೆ, ಹೊಸ ಋತು ಎಂದು ಅವರು ಉಲ್ಲೇಖಿಸಿರುವುದು ಐಪಿಎಲ್ 2024 ಕುರಿತ ಎಂಬುದಿನ್ನೂ ಸ್ಪಷ್ಟವಾಗಿಲ್ಲ.

Full View


ಐಪಿಎಲ್ 2024 ಕ್ರೀಡಾಕೂಟದಲ್ಲಿ ಎಂ.ಎಸ್.ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿ ಮರಳಲಿದ್ದಾರೆಯೆ ಎಂಬುದನ್ನು ಇನ್ನೂ ದೃಢಪಡಿಸಿಲ್ಲ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಐದು ಬಾರಿ ಪ್ರಶಸ್ತಿ ಜಯಿಸಿರುವ ಎಂ.ಎಸ್.ಧೋನಿ, 2023ರ ಐಪಿಎಲ್ ಋತು ಮುಕ್ತಾಯಗೊಂಡಾಗ, ನನ್ನ ದೇಹವೇನಾದರೂ ಅವಕಾಶ ನೀಡಿದರೆ ಮುಂದಿನ ಬಾರಿಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡುವುದಾಗಿ ಪ್ರಕಟಿಸಿದ್ದರು.

42 ವರ್ಷ ವಯಸ್ಸಿನ ಎಂ.ಎಸ್. ಧೋನಿ ಬ್ಯಾಟಿಂಗ್ ನಲ್ಲಿ ಈ ಹಿಂದಿನ ಸ್ಥಿರತೆ ಕಂಡು ಬರುತ್ತಿಲ್ಲ. ಹೀಗಾಗಿ ಎಂ.ಎಸ್.ಧೋನಿಗೆ ಪರ್ಯಾಯ ನಾಯಕನು ದೊರೆಯುವವರೆಗೂ ಅವರನ್ನೇ ನಾಯಕನನ್ನಾಗಿ ಮುಂದುವರಿಸುವ ನಿರ್ಧಾರಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಡಳಿತ ಮಂಡಳಿ ಬಂದಿದೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News