ಹೈದರಾಬಾದ್ ನಲ್ಲಿ ಸಿಎಸ್ ಕೆ ಆಟಗಾರರಿಂದ ಬಿರಿಯಾನಿ ಪಾರ್ಟಿ

Update: 2024-04-04 16:17 GMT

Photo: X \  @Chennai Super Kings

ಹೈದರಾಬಾದ್: ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಐಪಿಎಲ್ ಸಮಯದಲ್ಲಿ ಹೈದರಾಬಾದ್ನಲ್ಲಿದ್ದಾಗಲೆಲ್ಲಾ ಬಿರಿಯಾನಿ ಸವಿಯುತ್ತಾರೆ. ಶುಕ್ರವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಐಪಿಎಲ್ ಪಂದ್ಯದ ಮುನ್ನಾದಿನ ಕೂಡ ಚೆನ್ನೈ ಆಟಗಾರರು ಬಿರಿಯಾನಿ ಪಾರ್ಟಿ ಮಾಡಿದ್ದಾರೆ.

ಋತುರಾಜ್ ಗಾಯಕ್ವಾಡ್ ನೇತೃತ್ವದ ಸಿಎಸ್ಕೆ ತಂಡ ಹೈದರಾಬಾದ್ ನಲ್ಲಿದೆ. ಈ ನಗರವು ಚೆನ್ನೈ ತಂಡದ ಮಾಜಿ ಆಟಗಾರ ಅಂಬಟಿ ರಾಯುಡು ಅವರ ತವರು ಪಟ್ಟಣವಾಗಿದೆ.

ರಾಯುಡು 2023ರ ಐಪಿಎಲ್ ಋತುವಿನ ನಂತರ ಕ್ರಿಕೆಟ್ನಿಂದ ನಿವೃತ್ತಿ ಪ್ರಕಟಿಸಿದ್ದರು. ಕಳೆದ ವರ್ಷ ಚೆನ್ನೈ ತಂಡವು ಐದನೇ ಬಾರಿ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದು ಅತ್ಯಂತ ಯಶಸ್ವಿ ತಂಡ ಮುಂಬೈ ಇಂಡಿಯನ್ಸ್ ದಾಖಲೆಯನ್ನು ಸರಿಗಟ್ಟಿತ್ತು.

ಸಿಎಸ್ಕೆ ತಂಡವು ಬಿರಿಯಾನಿ ಪಾರ್ಟಿಯ ವೀಡಿಯೊವನ್ನು ಹಂಚಿಕೊಂಡಿದ್ದು, ಆಟಗಾರರು ವಿಶ್ವ ಪ್ರಸಿದ್ಧ ಹೈದರಾಬಾದ್ ಬಿರಿಯಾನಿ ಸವಿದಿದ್ದಾರೆ.

ರಾಯುಡು ಅವರು ರವೀಂದ್ರ ಜಡೇಜ, ದೀಪಕ್ ಚಹಾರ್, ಶಿವಂ ದುಬೆ ಹಾಗೂ ಮುಕೇಶ್ ಚೌಧರಿ ಅವರೊಂದಿಗೆ ಕ್ಯಾಮರಾಕ್ಕೆ ಪೋಸ್ ನೀಡುತ್ತಿರುವ ಚಿತ್ರವನ್ನು ಸಿಎಸ್ಕೆ ಫ್ರಾಂಚೈಸಿ ಪೋಸ್ಟ್ ಮಾಡಿದೆ.

ಚೆನ್ನೈ ಸೂಪರ್ ಕಿಂಗ್ಸ್ ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಮೂರು ಪಂದ್ಯಗಳನ್ನು ಆಡಿದ್ದು, ಎರಡರಲ್ಲಿ ಜಯ ಹಾಗೂ ಒಂದರಲ್ಲಿ ಸೋಲು ಕಂಡಿದೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News