ಆಸ್ಟ್ರೇಲಿಯ ವಿರುದ್ಧ ಒಟ್ಟು 153 ವಿಕೆಟ್ ಪಡೆದ ಬ್ರಾಡ್; ಈ ಸಾಧನೆ ಮಾಡಿದ ಮೊದಲ ಬೌಲರ್

Broad took a total of 153 wickets against Australia; He was the first bowler to achieve this feat

Update: 2023-08-01 17:50 GMT

Photo: PTI

ದಿ ಓವಲ್: ಸ್ಟುವರ್ಟ್ ಬ್ರಾಡ್ ಐದನೇ ಆ್ಯಶಸ್ ಪಂದ್ಯ ಆಡುವುದರೊಂದಿಗೆ ಅಂತರ್ರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳುವ ಮೂಲಕ ತಮ್ಮ ಯಶಸ್ವಿ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ಬ್ರಾಡ್ 2016ರಿಂದ ಟೆಸ್ಟ್ ಸ್ಪೆಷಲಿಸ್ಟ್ ಆಗಿದ್ದು, ಆಗ ಅವರು ಕೊನೆಯ ಬಾರಿ ಏಕದಿನ ಪಂದ್ಯವನ್ನಾಡಿದ್ದರು.

2014ರಲ್ಲಿ ಕೊನೆಯ ಬಾರಿ ಟಿ-20 ಪಂದ್ಯವನ್ನು ಆಡಿದ್ದರು. ಬ್ರಾಡ್ ಆಸ್ಟ್ರೇಲಿಯ ವಿರುದ್ಧ ಒಟ್ಟು 153 ವಿಕೆಟ್ ಗಳನ್ನು ಪಡೆದಿದ್ದು, ಆಸೀಸ್ ವಿರುದ್ಧ ಈ ಸಾಧನೆ ಮಾಡಿದ ಮೊದಲ ಬೌಲರ್ ಆಗಿದ್ದಾರೆ.

ಟೆಸ್ಟ್ ಕ್ರಿಕೆಟ್ ನಲ್ಲಿ ಬ್ರಾಡ್ ಅವರು ಓರ್ವ ಸಾರ್ವಕಾಲಿಕ ಶ್ರೇಷ್ಠ ವೇಗದ ಬೌಲರ್ ಆಗಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಬ್ರಾಡ್ 5ನೇ ಸ್ಥಾನದಲ್ಲಿದ್ದಾರೆ.

5ನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ನ 2 ವಿಕೆಟ್ ಗಳನ್ನು ಕಬಳಿಸಿದ ಬ್ರಾಡ್ ಇಂಗ್ಲೆಂಡ್ ತಂಡ 49 ರನ್ ಗಳಿಂದ ರೋಚಕ ಜಯ ಸಾಧಿಸಲು ನೆರವಾದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News