ಕಾರು ಅಪಘಾತ: ಪಾಕಿಸ್ತಾನದ ಇಬ್ಬರು ಮಹಿಳಾ ಕ್ರಿಕೆಟಿಗರಿಗೆ ಗಾಯ

Update: 2024-04-06 17:49 GMT

 ಬಿಸ್ಮಾ ಮರೂಫ್ | Photo: ANI 

ಕರಾಚಿ: ಪಾಕಿಸ್ತಾನ ಮಹಿಳೆಯರ ಕ್ರಿಕೆಟ್ ತಂಡದ ಸದಸ್ಯೆಯರಾದ ಬಿಸ್ಮಾ ಮರೂಫ್ ಹಾಗೂ ಸ್ಪಿನ್ನರ್ ಗುಲಾಮ್ ಫಾತಿಮಾ ಶುಕ್ರವಾರ ಸಂಜೆ ನಡೆದ ಕಾರು ಅಪಘಾತದಲ್ಲಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಶನಿವಾರ ಪ್ರಕಟನೆಯೊಂದರಲ್ಲಿ ದೃಢಪಡಿಸಿದೆ.

ಇಬ್ಬರು ಆಟಗಾರ್ತಿಯರು ಕಾರು ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎಂದಿರುವ ಪಿಸಿಬಿ, ಘಟನೆಯ ಕುರಿತು ಹೆಚ್ಚಿನ ವಿವರಗಳನ್ನು ನೀಡಿಲ್ಲ.

ಶುಕ್ರವಾರ ಸಂಜೆ ನಡೆದ ಕಾರು ಅಪಘಾತದಲ್ಲಿ ಗಾಯಗೊಂಡಿರುವ ಇಬ್ಬರು ಆಟಗಾರ್ತಿಯರಾದ ಬಿಸ್ಮಾ ಮರೂಫ್ ಹಾಗೂ ಗುಲಾಮ್ ಫಾತಿಮಾ ಸಣ್ಣಪುಟ್ಟ ಗಾಯದ ಹೊರತಾಗಿಯೂ ತಕ್ಷಣ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ. ಪ್ರಸ್ತುತ ಪಿಸಿಬಿ ವೈದ್ಯಕೀಯ ತಂದ ಆರೈಕೆಯಲ್ಲಿದ್ದಾರೆ ಎಂದು ಪಿಸಿಬಿ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಎಪ್ರಿಲ್ 18ರಿಂದ ಕರಾಚಿಯ ನ್ಯಾಶನಲ್ ಸ್ಟೇಡಿಯಮ್ ನಲ್ಲಿ ಆರಂಭವಾಗಲಿರುವ ವೆಸ್ಟ್ಇಂಡೀಸ್ ವಿರುದ್ಧದ ಮುಂಬರುವ ಸರಣಿಯ ತರಬೇತಿ ಶಿಬಿರದಲ್ಲಿ ಇಬ್ಬರೂ ಆಟಗಾರ್ತಿಯರು ಭಾಗವಹಿಸುವ ಸಾಧ್ಯತೆಯಿದೆ. ಈ ಇಬ್ಬರು ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದ ಭಾಗವಾಗಿದ್ದಾರೆ. ವಿಂಡೀಸ್ ವಿರುದ್ಧದ ಸರಣಿಯು 5 ಪಂದ್ಯಗಳ ಟಿ-20 ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನು ಒಳಗೊಂಡಿದೆ.

ಡಿಸೆಂಬರ್ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಪಾಕಿಸ್ತಾನ ಮಹಿಳಾ ತಂಡ ಏಕದಿನ ಸರಣಿಯನ್ನು ಜಯಿಸಿ 5 ವರ್ಷಗಳ ಪ್ರಶಸ್ತಿ ಬರ ನೀಗಿಸಿಕೊಂಡಾಗ ಈ ಇಬ್ಬರು ಆಟಗಾರ್ತಿಯರು ತಂಡದ ಪ್ರಮುಖ ಸದಸ್ಯರಾಗಿದ್ದರು. ಮರೂಫ್ 3 ಇನಿಂಗ್ಸ್ ಗಳಲ್ಲಿ 89 ರನ್ ಗಳಿಸಿ ಬ್ಯಾಟಿಂಗ್ ನಲ್ಲಿ ಮಿಂಚಿದ್ದರೆ, ಫಾತಿಮಾ ಸರಣಿಯಲ್ಲಿ ಆರು ವಿಕೆಟ್ ಗಳನ್ನು ಪಡೆದು ಗರಿಷ್ಠ ವಿಕೆಟ್ ಗಳನ್ನು ಪಡೆದ ಸಾಧನೆ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News