ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 18ನೇ ದ್ವಿಶತಕ ಗಳಿಸಿದ ಚೇತೇಶ್ವರ ಪೂಜಾರ

Update: 2024-10-21 15:15 GMT

ಚೇತೇಶ್ವರ ಪೂಜಾರ |  PC : PTI  

ರಾಜ್ಕೋಟ್ : ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅತ್ಯಂತ ಹೆಚ್ಚು ದ್ವಿಶತಕ ಗಳಿಸಿದ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಚೇತೇಶ್ವರ ಪೂಜಾರ 4ನೇ ಸ್ಥಾನಕ್ಕೇರಿದ್ದಾರೆ. ರಾಜ್ಕೋಟ್ ನಲ್ಲಿ ಸೋಮವಾರ ನಡೆದ ಛತ್ತೀಸ್ಗಢ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಸೌರಾಷ್ಟ್ರದ ಬ್ಯಾಟರ್ ಪೂಜಾರ ಈ ಮೈಲಿಗಲ್ಲು ತಲುಪಿದ್ದಾರೆ.

ತನ್ನ 18ನೇ ದ್ವಿಶತಕದ ಮೂಲಕ ಪೂಜಾರ ಅವರು ಇಂಗ್ಲೆಂಡ್ ಆಟಗಾರರಾದ ಮಾರ್ಕ್ ರಾಮ್ಪ್ರಕಾಶ್ ಹಾಗೂ ಹರ್ಬರ್ಟ್ ಸ್ಟಟ್ಕ್ಲಿಫ್ರನ್ನು ಹಿಂದಿಕ್ಕಿದರು. ಈ ಇಬ್ಬರು ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 17 ಬಾರಿ ದ್ವಿಶತಕ ಗಳಿಸಿದ್ದರು.

ಗರಿಷ್ಠ ದ್ವಿಶತಕ ಗಳಿಸಿದ ಪಟ್ಟಿಯಲ್ಲಿರುವ ಇನ್ನೋರ್ವ ಭಾರತೀಯರೆಂದರೆ-ಕೆ.ಎಸ್. ರಂಜಿತ್ ಸಿನ್ಹಜಿ. ರಂಜಿತ್ 14 ದ್ವಿಶತಕ ಗಳಿಸಿದ್ದಾರೆ.

ಪೂಜಾರ ಅವರು 197 ಎಸೆತಗಳಲ್ಲಿ ರಣಜಿ ಟ್ರೋಫಿ ಟೂರ್ನಿಯಲ್ಲಿ ತನ್ನ 25ನೇ ಹಾಗೂ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 66ನೇ ಶತಕ ಸಿಡಿಸಿದ್ದಾರೆ.

ಛತ್ತೀಸ್ಗಢ ವಿರುದ್ಧದ ಭರ್ಜರಿ ಬ್ಯಾಟಿಂಗ್ ನ ವೇಳೆ ಪೂಜಾರ ಅವರು ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 21,000 ರನ್ ಕ್ರಮಿಸಿದರು. ಸುನೀಲ್ ಗವಾಸ್ಕರ್, ಸಚಿನ್ ತೆಂಡುಲ್ಕರ್ ಹಾಗೂ ರಾಹುಲ್ ದ್ರಾವಿಡ್ ನಂತರ ಈ ಸಾಧನೆ ಮಾಡಿದ ಭಾರತದ 4ನೇ ಬ್ಯಾಟರ್ ಎನಿಸಿಕೊಂಡರು.

►ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಗರಿಷ್ಠ ದ್ವಿಶತಕ ಗಳಿಸಿದ ಆಟಗಾರರು

ಡಾನ್ ಬ್ರಾಡ್ಮನ್-37

ವಲ್ಲಿ ಹಮ್ಮಂಡ್-36

ಪಾಟ್ಸಿ ಹೆಂಡ್ರೆನ್-22

ಚೇತೇಶ್ವರ ಪೂಜಾರ-18

ಮಾರ್ಕ್ ರಾಮ್ಪ್ರಕಾಶ್, ಹೆರ್ಬರ್ಟ್ ಸ್ಟಟ್ಕ್ಲಿಫ್-17.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News