ನ್ಯೂಝಿಲ್ಯಾಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಶುಭಮನ್ ಗಿಲ್ ಲಭ್ಯ

Update: 2024-10-22 16:33 GMT

ಶುಭಮನ್ ಗಿಲ್ | PC : PTI  

ಹೊಸದಿಲ್ಲಿ : ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಶುಭಮನ್ ಗಿಲ್‌ ಅವರು ಕುತ್ತಿಗೆ ನೋವಿನಿಂದ ಚೇತರಿಸಿಕೊಳ್ಳುತ್ತಿದ್ದು, ನ್ಯೂಝಿಲ್ಯಾಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಆಡಲು ಫಿಟ್ ಇದ್ದಾರೆ ಎಂದು ವರದಿಯಾಗಿದೆ.

ಗಿಲ್ ಬೆಂಗಳೂರಿನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಈ ಪಂದ್ಯದಲ್ಲಿ ಭಾರತ ತಂಡವು ಸೋಲುಂಡಿತ್ತು. ಭಾರತದ ಬ್ಯಾಟಿಂಗ್ ಸರದಿಯು ಮೊದಲ ಇನಿಂಗ್ಸ್‌ನಲ್ಲಿ ಪರದಾಟ ನಡೆಸಿ ಕೇವಲ 46 ರನ್‌ಗೆ ಆಲೌಟಾಗಿತ್ತು. ಇದು ಟೆಸ್ಟ್ ಪಂದ್ಯದಲ್ಲಿ ಭಾರತ ಗಳಿಸಿದ್ದ ಮೂರನೇ ಕನಿಷ್ಠ ಸ್ಕೋರಾಗಿತ್ತು.

ಗಿಲ್ 2ನೇ ಪಂದ್ಯಕ್ಕೆ ಮರಳುವುದನ್ನು ದೃಢಪಡಿಸಿದ ಭಾರತದ ಬೌಲಿಂಗ್ ಕೋಚ್ ರಯಾನ್ ಟೆನ್ ಡೊಶೆಟ್, ಗಿಲ್ ಅವರು ಎರಡನೇ ಪಂದ್ಯಕ್ಕೆ ಲಭ್ಯವಿರುವಂತೆ ಕಂಡು ಬಂದಿದ್ದಾರೆ. ಅವರು ಬೆಂಗಳೂರಿನಲ್ಲಿ ನೆಟ್ ಸೆಶನ್‌ನಲ್ಲಿ ದೀರ್ಘ ಸಮಯ ಬ್ಯಾಟಿಂಗ್ ಅಭ್ಯಾಸ ಮಾಡಿದ್ದಾರೆ. ನನ್ನ ಪ್ರಕಾರ ಅವರು 2ನೇ ಪಂದ್ಯಕ್ಕೆ ಫಿಟ್ ಇರಲಿದ್ದಾರೆ ಎಂದರು.

ಭಾರತವು ಪುಣೆಯಲ್ಲಿ ನಡೆಯಲಿರುವ 2ನೇ ಟೆಸ್ಟ್ ಪಂದ್ಯಲ್ಲಿ ಪುಟಿದೇಳುವ ಗುರಿ ಇಟ್ಟುಕೊಂಡಿದ್ದು, ಗಿಲ್ ಸೇರ್ಪಡೆಯು ತಂಡದ ಬ್ಯಾಟಿಂಗ್ ಸರದಿಗೆ ಶಕ್ತಿ ತುಂಬಲಿದೆ.

ಬೆಂಗಳೂರಿನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ 8 ವಿಕೆಟ್ ಅಂತರದಿಂದ ಸೋತಿದ್ದ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಅಕ್ಟೋಬರ್ 24ರಿಂದ 28ರ ತನಕ ಎರಡನೇ ಟೆಸ್ಟ್ ಪಂದ್ಯವನ್ನು ಆಡಲಿದೆ.

ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತವು ನ್ಯೂಝಿಲ್ಯಾಂಡ್‌ಗೆ 107 ರನ್ ಗುರಿ ನೀಡಿತ್ತು. ಜಸ್‌ಪ್ರಿತ್ ಬುಮ್ರಾ 29 ರನ್‌ಗೆ 2 ವಿಕೆಟ್ ಕಬಳಿಸಿದ್ದರು. ಆದರೆ ವಿಲ್ ಯಂಗ್(ಔಟಾಗದೆ 48) ಹಾಗೂ ರಚಿನ್ ರವೀಂದ್ರ(ಔಟಾಗದೆ 39)ಕಿವೀಸ್ ತಂಡ ಸುಲಭವಾಗಿ ಜಯ ದಾಖಲಿಸಲು ನೆರವಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News