ಆಸ್ಟ್ರೇಲಿಯ ಪ್ರವಾಸಕ್ಕೆ ಭಾರತ ಎ ತಂಡ ಪ್ರಕಟ, ಋತುರಾಜ್ ಗಾಯಕ್ವಾಡ್ ನಾಯಕತ್ವ

Update: 2024-10-22 16:41 GMT

ಋತುರಾಜ್ ಗಾಯಕ್ವಾಡ್ |  PC : PTI 

ಹೊಸದಿಲ್ಲಿ: ಆಸ್ಟ್ರೇಲಿಯ ಪ್ರವಾಸಕ್ಕೆ ಋತುರಾಜ್ ಗಾಯಕ್ವಾಡ್ 15 ಸದಸ್ಯರನ್ನು ಒಳಗೊಂಡ ಭಾರತ ಎ ತಂಡದ ನಾಯಕತ್ವವಹಿಸಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ಭಾರತ ಎ ತಂಡವು ಆಸ್ಟ್ರೇಲಿಯ ಎ ತಂಡದ ವಿರುದ್ಧ ಎರಡು ಪ್ರಥಮ ದರ್ಜೆ ಪಂದ್ಯಗಳನ್ನು ಆಡಲಿದೆ. ಪರ್ತ್‌ನಲ್ಲಿ ಟೀಮ್ ಇಂಡಿಯಾ ಎದುರು ಮೂರು ದಿನಗಳ ಇಂಟ್ರಾ-ಸ್ಕ್ವಾಡ್ ಗೇಮ್‌ನಲ್ಲಿ ಭಾಗವಹಿಸಲಿದೆ.

ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ನಡೆಯುವ ಐದು ಪಂದ್ಯಗಳ ಟೆಸ್ಟ್ ಸರಣಿಯು ನವೆಂಬರ್ 22ರಂದು ಪರ್ತ್‌ನಲ್ಲಿ ಆರಂಭವಾಗಲಿದೆ. ಅಡಿಲೇಡ್, ಬ್ರಿಸ್ಬೇನ್, ಮೆಲ್ಬರ್ನ್ ಹಾಗೂ ಸಿಡ್ನಿಯಲ್ಲಿ ಇನ್ನುಳಿದ 4 ಟೆಸ್ಟ್ ಪಂದ್ಯಗಳು ನಡೆಯುತ್ತವೆ.

►ಭಾರತ ಎ ತಂಡ

ಋತುರಾಜ್ ಗಾಯಕ್ವಾಡ್(ನಾಯಕ), ಅಭಿಮನ್ಯು ಈಶ್ವರನ್(ಉಪ ನಾಯಕ), ಸಾಯಿ ಸುದರ್ಶನ್, ನಿತಿಶ್ ಕುಮಾರ್ ರೆಡ್ಡಿ, ದೇವದತ್ತ ಪಡಿಕ್ಕಲ್, ರಿಕಿ ಭುಯ್, ಬಾಬಾ ಇಂದ್ರಜಿತ್, ಇಶಾನ್ ಕಿಶನ್(ವಿಕೆಟ್‌ಕೀಪರ್), ಅಭಿಷೇಕ್ ಪೊರೆಲ್(ವಿಕೆಟ್‌ಕೀಪರ್), ಮುಕೇಶ್ ಕುಮಾರ್, ಖಲೀಲ್ ಅಹ್ಮದ್, ಯಶ್ ದಯಾಳ್, ನವದೀಪ್ ಸೈನಿ, ಮಾನವ್ ಸುಥರ್, ತನುಷ್ ಕೋಟ್ಯಾನ್.

►ವೇಳಾಪಟ್ಟಿ

ಅಕ್ಟೋಬರ್ 31-ನವೆಂಬರ್ 3: ಮೊದಲ ಪ್ರಥಮ ದರ್ಜೆ ಪಂದ್ಯ, ಆಸ್ಟ್ರೇಲಿಯ ಎ ವಿರುದ್ಧ, ಜಿಬಿಆರ್‌ಎ, ಮಕಾಯ್

ನವೆಂಬರ್ 7-10: ಎರಡನೇ ಪ್ರಥಮ ದರ್ಜೆ ಪಂದ್ಯ, ಆಸ್ಟ್ರೇಲಿಯ ಎ ವಿರುದ್ಧ-ಎಂಸಿಜಿ, ಮೆಲ್ಬರ್ನ್

ನವೆಂಬರ್ 15-17: ಇಂಟ್ರಾ-ಸ್ಕ್ವಾಡ್ ಪಂದ್ಯ, ಟೀಮ್ ಇಂಡಿಯಾ ವಿರುದ್ಧ -ವಾಕಾ, ಪರ್ತ್. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News