ಈ ವರ್ಷ 50 ಗೋಲುಗಳನ್ನು ಬಾರಿಸಿದ ಕ್ರಿಸ್ಟಿಯಾನೊ ರೊನಾಲ್ಡೊ

Update: 2023-12-12 16:44 GMT

ಕ್ರಿಸ್ಟಿಯಾನೊ ರೊನಾಲ್ಡೊ | Photo : X

ರಿಯಾದ್: “ಈ ವರ್ಷ ಇನ್ನಷ್ಟು ಗೋಲುಗಳನ್ನು ಬಾರಿಸುವ ಅವಕಾಶವಿದೆ’’ ಎಂದು ಫುಟ್ಬಾಲ್ ಜಗತ್ತಿನ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಸೋಮವಾರ ಹೇಳಿದ್ದಾರೆ. 2023ರ ತನ್ನ 50ನೇ ಗೋಲನ್ನು ಬಾರಿಸಿದ ಬಳಿಕ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೌದಿ ಕಿಂಗ್ ಕಪ್ ಪಂದ್ಯಾವಳಿಯ ಸೋಮವಾರ ನಡೆದ ಪಂದ್ಯದಲ್ಲಿ ರೊನಾಲ್ಡೊರ ಅಲ್-ನಾಸರ್ ತಂಡವು ಅಲ್ ಶಬಾಬ್ ತಂಡವನ್ನು 5-2 ಗೋಲುಗಳಿಂದ ಸೋಲಿಸಿದೆ. ಈ ಪಂದ್ಯದಲ್ಲಿ 74ನೇ ನಿಮಿಷದಲ್ಲಿ ಅವರು ಬಾರಿಸಿದ ಗೋಲು ಅವರ ಈ ವರ್ಷದ 50ನೇ ಗೋಲಾಯಿತು.

ಈ ವಿಜಯದೊಂದಿಗೆ ಅಲ್-ನಾಸರ್ ಸೆಮಿಫೈನಲ್ ತಲುಪಿದೆ.

“ಶ್ರೇಷ್ಠ ವಿಜಯ. ಇದು 2023ರಲ್ಲಿ ನನ್ನ 50ನೇ ಗೋಲು ಎಂದು ಘೋಷಿಸಲು ರೋಮಾಂಚನವಾಗುತ್ತಿದೆ’’ ಎಂದು 38 ವರ್ಷದ ಪೋರ್ಚುಗೀಸ್ ಆಟಗಾರ ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ.

“ನನ್ನ ಸಹ ಆಟಗಾರರು, ಅಭಿಮಾನಿಗಳು ಮತ್ತು ಕುಟುಂಬದ ಅಚಲ ಬೆಂಬಲದಿಂದಾಗಿ ಇದು ಸಾಧ್ಯವಾಗಿದೆ. ಈ ವರ್ಷ ಇನ್ನೂ ಕೆಲವು ಗೋಲುಗಳನ್ನು ಬಾರಿಸಲು ಅವಕಾಶವಿದೆ’’ ಎಂದರು.

ಕಳೆದ ವರ್ಷದ ಕೊನೆಯಲ್ಲಿ ಅಲ್-ನಾಸರ್ ತಂಡವನ್ನು ಸೇರಿದ ಬಳಿಕ, ನಾಯಕ ರೊನಾಲ್ಡೊ ಒಂದು ಪಂದ್ಯದಲ್ಲಿ ಒಂದು ಗೋಲಿನ ಸರಾಸರಿಯನ್ನು ಹೊಂದಿದ್ದಾರೆ.

2023ರಲ್ಲಿ, ಅವರು ಪೋರ್ಚುಗಲ್ ಪರವಾಗಿ ಒಂಭತ್ತು ಪಂದ್ಯಗಳಲ್ಲಿ 10 ಗೋಲುಗಳನ್ನು ಬಾರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News