2024ರ ಬಳಿಕವೂ ಐಪಿಎಲ್ ನಲ್ಲಿ ಆಡಲಿರುವ ಧೋನಿ?

Update: 2024-03-03 17:12 GMT

ಮಹೇಂದ್ರ ಸಿಂಗ್ ಧೋನಿ | Photo: NDTV 

ಚೆನ್ನೈ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಭವಿಷ್ಯದ ಬಗ್ಗೆ ಊಹಾಪೋಹಗಳು ನಡೆಯುತ್ತಿವೆ. 2024ರ ಐಪಿಎಲ್ ಋತು ಅವರ ಕೊನೆಯದು ಎಂಬ ಅಭಿಪ್ರಾಯವನ್ನು ಹೆಚ್ಚಿನವರು ಹೊಂದಿದ್ದಾರೆ.

ಐಪಿಎಲ್ನಲ್ಲಿ ಧೋನಿ ಅತ್ಯಂತ ಯಶಸ್ವಿ ನಾಯಕನಾಗಿದ್ದಾರೆ. ಅವರ ನೇತೃತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐದು ಬಾರಿ ಪ್ರಶಸ್ತಿ ಗೆದ್ದಿದೆ. ಈ ವಿಷಯದಲ್ಲಿ ಅವರು ರೋಹಿತ್ ಶರ್ಮರ ದಾಖಲೆಯನ್ನು ಸರಿಗಟ್ಟಿದ್ದಾರೆ. ರೋಹಿತ್ ಶರ್ಮ ಕೂಡ ಮುಂಬೈ ಇಂಡಿಯನ್ಸ್ ತಂಡವನ್ನು ಐದು ಬಾರಿ ಪ್ರಶಸ್ತಿಯತ್ತ ಮುನ್ನಡೆಸಿದ್ದಾರೆ.

ತನ್ನ ಐಪಿಎಲ್ ಭವಿಷ್ಯದ ಬಗ್ಗೆ ಧೋನಿ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಅವರ ಬಾಲ್ಯ ಸ್ನೇಹಿತ ಪರಮ್ಜಿತ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

“ಇದು ಅವರ (ಧೋನಿಯ) ಕೊನೆಯ ಐಪಿಎಲ್ ಋತು ಎಂದು ನನಗನಿಸುವುದಿಲ್ಲ. ಅವರು ಈಗಲೂ ದೈಹಿಕ ಕ್ಷಮತೆ ಹೊಂದಿದ್ದಾರೆ. ಅವರು ಇನ್ನೂ ಒಂದೆರಡು ಋತುಗಳಲ್ಲಿ ಆಡಬಹುದು ಎನಿಸುತ್ತದೆ. ಅವರು ಖಂಡಿತವಾಗಿಯೂ ಇನ್ನೊಂದು ಋತುವಿನಲ್ಲಿ ಆಡುತ್ತಾರೆ’’ ಎಂದು ‘ವನ್ಕ್ರಿಕೆಟ್’ ಜೊತೆಗೆ ಮಾತನಾಡಿದ ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News