ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು ಕಷ್ಟಕರ, ನಿವೃತ್ತಿಯ ಯೋಚನೆ ಇಲ್ಲ: ಸೈನಾ ನೆಹ್ವಾಲ್

Update: 2023-09-13 17:07 GMT

ಸೈನಾ ನೆಹ್ವಾಲ್ Photo- PTI

ಹೊಸದಿಲ್ಲಿ : ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು ನನಗೆ ಕಷ್ಟಕರವಾಗಿದೆ. ಆದರೆ ಬ್ಯಾಡ್ಮಿಂಟನ್‌ನಿಂದ ನಿವೃತ್ತಿಯಾಗುವ ಯೋಚನೆ ಇಲ್ಲ ಎಂದು ಹಿರಿಯ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಹೇಳಿದ್ದಾರೆ.

ಮೊಣಕಾಲು ನೋವು ಸಹಿತ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ 33ರ ಹರೆಯದ ಹೈದರಾಬಾದ್ ಆಟಗಾರ್ತಿ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಇವೆಂಟ್‌ಗಳಲ್ಲಿ ನಿರಂತರವಾಗಿ ಫಿಟ್ನೆಸ್ ಕುರಿತ ಕಠಿಣ ಸವಾಲು ಎದುರಿಸುತ್ತಿದ್ದಾರೆ. ಪ್ರಸಕ್ತ ಅವರು ವಿಶ್ವ ರ್ಯಾಂಕಿಂಗ್‌ನಲ್ಲಿ 55ನೇ ಸ್ಥಾನಕ್ಕೆ ಕುಸಿದಿದ್ದಾರೆ.

ನಾನು ಒಂದು ಅಥವಾ ಎರಡು ಗಂಟೆ ಕಾಲ ತರಬೇತಿ ಪಡೆದರೆ ನನ್ನ ಮೊಣಕಾಲಿನಲ್ಲಿ ಊತ ಕಾಣಿಸಿಕೊಳ್ಳುತ್ತದೆ. ನನ್ನ ಮೊಣಕಾಲು ಬಗ್ಗಿಸಲು ನನಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ 2ನೇ ಹಂತದ ತರಬೇತಿ ಸಾಧ್ಯವಾಗುತ್ತಿಲ್ಲ. ವೈದ್ಯರು ಒಂದೆರಡು ಇಂಜೆಕ್ಷನ್ ಕೊಟ್ಟಿದ್ದಾರೆ. ಒಲಿಂಪಿಕ್ಸ್ ಹತ್ತಿರ ಬರುತ್ತಿದೆ. ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆಯುವುದು ಖಂಡಿತವಾಗಿಯೂ ಕಠಿಣವಾಗಿದೆ ಎಂದು ಸೈನಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬ್ಯಾಡ್ಮಿಂಟನ್ ಅಂಗಳಕ್ಕೆ ಮರಳಲು ನನ್ನ ಎಲ್ಲ ಪ್ರಯತ್ನ ಮಾಡುತ್ತಿರುವೆ. ಫಿಸಿಯೋಗಳು ನನಗೆ ಸಹಾಯ ಮಾಡುತ್ತಿದ್ದಾರೆ. ಆದರೆ ಊತ ಕಡಿಮೆಯಾಗದಿದ್ದರೆ ಚೇತರಿಸಿಕೊಳ್ಳಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ನಾನು ಅರೆ ಮನಸ್ಸಿನಿಂದ ಆಡಲು ಬಯಸುವುದಿಲ್ಲ ಎಂದು ಸೈನಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News