ಭಾರತೀಯ ಸ್ಪಿನ್ನರ್‌ಗಳ ಮುಂದೆ ನಡೆಯದ ಇಂಗ್ಲೆಂಡ್ ಆಕ್ರಮಣಕಾರಿ ಆಟ
Update: 2024-01-25 15:57 IST

Photo:X/@BCCI
ಹೈದರಾಬಾದ್: ಇಂಗ್ಲೆಂಡ್ ವಿರುದ್ಧ ಗುರುವಾರ ಆರಂಭಗೊಂಡ ಮಹತ್ವದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತೀಯ ಸ್ಪಿನ್ನರ್‌ಗಳು ಪ್ರಾಬಲ್ಯ ಸಾಧಿಸಿದ್ದಾರೆ. ಆಕ್ರಮಣಕಾರಿ ಆಟದ ಮೂಲಕ ಇನ್ನಿಂಗ್ಸ್ ಆರಂಭಿಸಿದ ಹೊರತಾಗಿಯೂ ಇಂಗ್ಲೆಂಡ್ ಕೇವಲ 246 ರನ್‌ಗೆ ಆಲೌಟಾಯಿತು. ನಾಯಕ ಬೆನ್ ಸ್ಟೋಕ್ಸ್ ಹೋರಾಟದ 70 ರನ್ ಸಿಡಿಸಿ ತಂಡದ ಮೊತ್ತವನ್ನು 250ರ ಸನಿಹಕ್ಕೆ ತಲುಪಿಸಿದರು.
ಬಳಿಕ ಇನ್ನಿಂಗ್ಸ್ ಆರಂಭಿಸಿದ ಭಾರತ ಕೂಡಾ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದೆ. ತಂಡ 11 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 78 ರನ್ ಗಳಿಸಿದೆ.