ಯೂರೊ ಕಪ್: ಡಿಗೊ ಕೋಸ್ಟಾ ಸಾಹಸದಲ್ಲಿ ಕ್ವಾರ್ಟರ್ ಫೈನಲ್ ಗೆ ಮುನ್ನಡೆದ ಪೋರ್ಚುಗಲ್

Update: 2024-07-02 04:35 GMT

PC: x.com/CristianoXtra_

ಯೂರೋಪಿಯನ್ ಫುಟ್ಬಾಲ್ ಟೂರ್ನಿಯ 16ರ ಘಟ್ಟದ ಪಂದ್ಯದಲ್ಲಿ ಸೋಮವಾರ ಸ್ಲೊವಾನಿಯಾ ವಿರುದ್ಧ ಪೆನಾಲ್ಟಿ ಶೂಟೌಟ್ ನಲ್ಲಿ 3-0 ಗೋಲುಗಳ ಜಯ ಗಳಿಸಿದ ಪೋರ್ಚ್ಗಲ್ ಕ್ವಾರ್ಟರ್ ಫೈನಲ್ ಗೆ ಮುನ್ನಡೆದಿದೆ.

ನಿಗದಿತ ಅವಧಿಯಲ್ಲಿ ಉಭಯ ತಂಡಗಳು ಯಾವುದೇ ಗೋಲು ಗಳಿಸದೇ ಡ್ರಾ ಸಾಧಿಸಿದ್ದರಿಂದ ಪೆನಾಲ್ಟಿ ಶೂಟೌಟ್ ನಲ್ಲಿ ಪಂದ್ಯದ ಫಲಿತಾಂಶ ನಿರ್ಧರಿಸಬೇಕಾಯಿತು. ಉಭಯ ತಂಡಗಳ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವಂತೆ ಬೆರ್ನಾಡೊ ಸಿಲ್ವಾ ಸ್ಪಾಟ್ ಕಿಕ್ ನಲ್ಲಿ ಗೋಲು ಗಳಿಸಿ ಪೋರ್ಚುಗಲ್ ಪಾಳಯದಲ್ಲಿ ಸಂಭ್ರಮ ಮೂಡಿಸಿದರು.

ಮೊದಲ ಹೆಚ್ಚುವರಿ ಅವಧಿಯಲ್ಲಿ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಪೆನಾಲ್ಟಿ ಅವಕಾಶವನ್ನು ಕಳೆದುಕೊಂಡರು. ಈ ಅವಕಾಶ ಕಳೆದುಕೊಂಡ ರೊನಾಲ್ಡೊ ಅಕ್ಷರಶಃ ಅಳುತ್ತಿರುವ ಹಾಗೂ ಸಹ ಆಟಗಾರರು ಅವರನ್ನು ಸಮಾಧಾನಪಡಿಸುತ್ತಿರುವ ದೃಶ್ಯ ಗಮನ ಸೆಳೆಯಿತು. ಇದಕ್ಕೂ ಮುನ್ನ ಸ್ಲೋವಾಕಿಯಾ ಆಟಗಾರ ಬೆಂಜಮಿನ್ ಸೆಸ್ಕೊ ಕೂಡಾ ಪೋರ್ಚುಗಲ್ ಗೆ ಆಘಾತ ತರುವ ಅವಕಾಶವನ್ನು ಹಾಳು ಮಾಡಿಕೊಂಡರು.

ಪೋರ್ಚುಗಲ್ ಗೋಲ್ ಕೀಪರ್ ಡಿಗೊ ಕೋಸ್ಟಾ, ಪೆನಾಲ್ಟಿ ಶೂಟೌಟ್ ನಲ್ಲಿ ಸ್ಲೋವಾಕಿಯಾದ ಎಲ್ಲ ಮೂರು ಪೆನಾಲ್ಟಿಗಳನ್ನು ಯಶಸ್ವಿಯಾಗಿ ತಡೆದರೆ, ರೊನಾಲ್ಡೊ, ಬ್ರೂನೊ ಫೆರ್ನಾಂಡಿಸ್ ಮತ್ತು ಸಿಲ್ವಾ ಹೀಗೆ ಮೂವರು ಕೂಡಾ ತಮ್ಮ ಅವಕಾಶವನ್ನು ಗೋಲಾಗಿ ಪರಿವರ್ತಿಸುವ ಮೂಲಕ ಪೋರ್ಚುಗಲ್ ಮುಂದಿನ ಹಂತ ತಲುಪಲು ನೆರವಾದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News