ಮೊತ್ತ ಮೊದಲ ಬಾರಿ ಭಾರತ-ಇಂಗ್ಲೆಂಡ್ ಮಹಿಳೆಯರ ಟೆಸ್ಟ್ ಪಂದ್ಯಕ್ಕೆ ಲಾರ್ಡ್ಸ್ ಕ್ರೀಡಾಂಗಣ ಆತಿಥ್ಯ

Update: 2024-08-22 15:52 GMT

PC : X 

ಹೊಸದಿಲ್ಲಿ : ಕ್ರಿಕೆಟ್‌ನ ತವರು ಎಂದೇ ಕರೆಯಲ್ಪಡುವ ಲಾರ್ಡ್ಸ್ ಕ್ರೀಡಾಂಗಣವು 2026ರಲ್ಲಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದು, ಇಂಗ್ಲೆಂಡ್ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ)ಗುರುವಾರ ಈ ವಿಚಾರವನ್ನು ಬಹಿರಂಗಪಡಿಸಿದೆ.

ಪ್ರತಿಷ್ಠಿತ ಕ್ರೀಡಾಂಗಣವು ಇದೇ ಮೊದಲ ಬಾರಿ ಮಹಿಳೆಯರ ಟೆಸ್ಟ್ ಪಂದ್ಯದ ಆತಿಥ್ಯವನ್ನು ವಹಿಸಲಿದೆ. ಇದರಲ್ಲಿ ಆತಿಥೇಯ ಇಂಗ್ಲೆಂಡ್ ಹಾಗೂ ಭಾರತ ತಂಡಗಳು ಸೆಣಸಾಡಲಿವೆ.

ಜುಲೈ 2025ರಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವೆ 3 ಪಂದ್ಯಗಳ ಏಕದಿನ ಸರಣಿ ಮುಗಿದ ನಂತರ ಈ ಪಂದ್ಯವನ್ನು ನಿಗದಿಪಡಿಸಲಾಗಿದೆ ಎಂದು ಇಸಿಬಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

2026ರಲ್ಲಿ ಲಾರ್ಡ್ಸ್‌ನಲ್ಲಿ ಮೊದಲ ಬಾರಿ ನಡೆಯಲಿರುವ ಮಹಿಳೆಯರ ಟೆಸ್ಟ್ ಪಂದ್ಯದಲ್ಲಿ ಭಾರತದ ಮಹಿಳೆಯರ ತಂಡ ಆಡಲಿದೆ ಎಂದು ಖಚಿತಪಡಿಸಲು ನಮಗೆ ಖುಷಿಯಾಗುತ್ತಿದೆ. ಇದು ನಿಜವಾಗಿಯೂ ವಿಶೇಷ ಸಂದರ್ಭ ಎಂದು ಇಸಿಬಿಯ ಸಿಇಒ ರಿಚರ್ಡ್ ಗೌಲ್ಡ್ ಹೇಳಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳು ಸೆಪ್ಟಂಬರ್ 2, 4 ಹಾಗೂ 7ರಂದು 3 ಪಂದ್ಯಗಳ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯಗಳು ಕ್ರಮವಾಗಿ ಹೆಡ್ಡಿಂಗ್ಲೆ, ಲಾರ್ಡ್ಸ್ ಹಾಗೂ ಸೌತಾಂಪ್ಟನ್‌ನಲ್ಲಿ ನಡೆಯಲಿದೆ.

ಲಾರ್ಡ್ಸ್‌ನಲ್ಲಿ ಮೊದಲ ಬಾರಿ ನಡೆಯಲಿರುವ ಏಕೈಕ ಮಹಿಳಾ ಟೆಸ್ಟ್ ಪಂದ್ಯದಲ್ಲಿ ಭಾಗವಹಿಸಲು ಭಾರತದ ಮಹಿಳೆಯರ ತಂಡ 2026ಕ್ಕೆ ಇಂಗ್ಲೆಂಡ್‌ ಗೆ ವಾಪಸಾಗಲಿದೆ ಎನ್ನುವುದು ದೃಢಪಟ್ಟಿದೆ ಎಂದು ಇಸಿಬಿ ತಿಳಿಸಿದೆ.

ಭಾರತವು 1986ರಿಂದ ಇಂಗ್ಲೆಂಡ್ ವಿರುದ್ಧ ತನ್ನ ತವರು ನೆಲದಲ್ಲಿ 9 ಟೆಸ್ಟ್ ಪಂದ್ಯಗಳನ್ನು ಆಡಿದೆ. ಜೂನ್ 2021ರಲ್ಲಿ ಬ್ರಿಸ್ಟೋಲ್‌ನಲ್ಲಿ ನಡೆದಿದ್ದ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News