ರಸ್ತೆ ಅಪಘಾತದಲ್ಲಿ ಗಾಯ: ಶ್ರೀಲಂಕಾದ ಕ್ರಿಕೆಟಿಗ ತಿರಿಮನ್ನೆ ಆಸ್ಪತ್ರೆಗೆ ದಾಖಲು

Update: 2024-03-14 16:13 GMT

Photo :  Social Media

ಕೊಲಂಬೊ: ರಸ್ತೆ ಅಪಘಾತದಲ್ಲಿ ಸಣ್ಣಮಟ್ಟಿನ ಗಾಯಕ್ಕೆ ಒಳಗಾಗಿರುವ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಲಹಿರು ತಿರಿಮನ್ನೆ ಅನುರಾದಪುರದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ಗುರುವಾರ ವರದಿ ಮಾಡಿದೆ.

ಅಡಾ ಡೆರಾನಾದಲ್ಲಿ ವರದಿಯಾಗಿರುವ ಪ್ರಕಾರ, 34ರ ವಯಸ್ಸಿನ ತಿರಿಮನ್ನೆ ಅಪಘಾತದಲ್ಲಿ ಉಂಟಾದ ಸಣ್ಣಪುಟ್ಟ ಗಾಯದೊಂದಿಗೆ ಅನುರಾದಪುರದ ಟೀಚಿಂಗ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಾಷ್ಟ್ರ ರಾಜಧಾನಿ ಕೊಲಂಬೊದಿಂದ 205 ಕಿ.ಮೀ. ದೂರದಲ್ಲಿರುವ ಅನುರಾದಪುರ ಪ್ರಮುಖ ಪಟ್ಟಣವಾಗಿದೆ.

ತಿರಿಮನ್ನೆ ಪ್ರಯಾಣಿಸುತ್ತಿದ್ದ ಕಾರು ಇಂದು ಬೆಳಗ್ಗೆ 7:45ರ ಸುಮಾರಿಗೆ ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇತರ ಮೂವರು, ಲಾರಿಯ ಚಾಲಕ ಹಾಗೂ ಇನ್ನೋರ್ವ ವ್ಯಕ್ತಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಿರಿಮನ್ನೆ ಶ್ರೀಲಂಕಾದ ಪರ 44 ಟೆಸ್ಟ್ ಪಂದ್ಯಗಳನ್ನಾಡಿದ್ದು ಮೂರು ಶತಕಗಳ ಸಹಿತ 2,088 ರನ್ ಗಳಿಸಿದ್ದರು. ದ್ವೀಪರಾಷ್ಟ್ರದ ಪರ 127 ಏಕದಿನ ಪಂದ್ಯಗಳನ್ನು ಆಡಿರುವ ತಿರಿಮನ್ನೆ ಒಟ್ಟು 3,164 ರನ್ ಗಳಿಸಿದ್ದಾರೆ. ಶ್ರೀಲಂಕಾದ ಪರ 26 ಟಿ-20 ಅಂತರ್ರಾಷ್ಟ್ರೀಯ ಪಂದ್ಯಗಳನ್ನೂ ಆಡಿದ್ದರೆ. 2022ರಲ್ಲಿ ಶ್ರೀಲಂಕಾದ ಪರ ಕೊನೆಯ ಪಂದ್ಯ ಆಡಿದ್ದ ತಿರಿಮನ್ನೆ 2023ರಲ್ಲಿ ನಿವೃತ್ತಿ ಪ್ರಕಟಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News