ʼಫ್ರೀ ಫೆಲೆಸ್ತೀನ್ʼ ಟಿ - ಶರ್ಟ್ ತೊಟ್ಟು ಪಿಚ್‌ಗೆ ನುಗ್ಗಿ, ಕೊಹ್ಲಿಯನ್ನು ತಬ್ಬಿಕೊಂಡ ಅಭಿಮಾನಿ

Update: 2023-11-19 10:49 GMT

Photo : x/@lav_narayanan

ಅಹಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ವಿಶ್ವಕಪ್ ಫೈನಲ್‌ನಲ್ಲಿ ಭದ್ರತಾ ಉಲ್ಲಂಘನೆ ನಡೆದಿದ್ದು, ಅಭಿಮಾನಿಯೊಬ್ಬರು ಪಿಚ್‌ಗೆ ನುಗ್ಗಿ ವಿರಾಟ್ ಕೊಹ್ಲಿಯನ್ನು ತಬ್ಬಿಕೊಂಡ ಘಟನೆ ವರದಿಯಾಗಿದೆ.

ಪಂದ್ಯದ 14 ನೇ ಓವರ್‌ನಲ್ಲಿ, 'ಫ್ರೀ ಫೆಲೆಸ್ತೀನ್‌' ಟಿ-ಶರ್ಟ್‌ನೊಂದಿಗೆ ಅಭಿಮಾನಿಯೊಬ್ಬರು ಒಳಗೆ ನುಗ್ಗಿ, ಕೊಹ್ಲಿಯನ್ನು ತಬ್ಬಿಕೊಂಡರು. ಕೂಡಲೇ ಎಚ್ಚೆತ್ತ ಭದ್ರತಾ ಸಿಬ್ಬಂದಿಗಳು ಅಭಿಮಾನಿಯನ್ನು ಮೈದಾನದಿಂದ ಹೊರ ಕರೆದೊಯ್ದರು. ಬಳಿಕ ಪಂದ್ಯ ಮತ್ತೆ ಪುನರಾರಂಭವಾಯಿತು. ಅಭಿಮಾನಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News