ಫ್ರೆಂಚ್ ಓಪನ್: ಎಲೆನಾ ರೈಬಾಕಿನಾ ಶುಭಾರಂಭ
ಪ್ಯಾರಿಸ್, ಮೇ 28: ಬೆಲ್ಜಿಯಂನ ಗ್ರೀನ್ ಮಿನ್ನೆನ್ ವಿರುದ್ಧ ಮಂಗಳವಾರ ನೇರ ಸೆಟ್ಗಳ ಅಂತರದಿಂದ ಜಯ ಸಾಧಿಸಿರುವ ಎಲೆನಾ ರೈಬಾಕಿನಾ ಫ್ರೆಂಚ್ ಓಪನ್ನಲ್ಲಿ ಶುಭಾರಂಭ ಮಾಡಿದ್ದಾರೆ.
ಕೇವಲ 73 ನಿಮಿಷಗಳಲ್ಲಿ ಕೊನೆಗೊಂಡಿರುವ ಮಹಿಳೆಯರ ಸಿಂಗಲ್ಸ್ನ ಮೊದಲ ಸುತ್ತಿನ ಪಂದ್ಯದಲ್ಲಿ ಮಾಜಿ ವಿಂಬಲ್ಡನ್ ಚಾಂಪಿಯನ್ ರೈಬಾಕಿನಾ ಅವರು ಮಿನ್ನೆನ್ ವಿರುದ್ಧ 6-2, 6-3 ಸೆಟ್ಗಳ ಅಂತರದಿಂದ ಜಯ ಸಾಧಿಸಿದರು.
ರೈಬಾಕಿನಾ ಮುಂದಿನ ಸುತ್ತಿನಲ್ಲಿ ಮೂರು ಬಾರಿಯ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಆಂಜೆಲಿಕ್ ಕರ್ಬರ್ ಅಥವಾ ಡಚ್ನ ಅರಂಕ್ಸಾ ರಸ್ರನ್ನು ಎದುರಿಸಲಿದ್ದಾರೆ.
ಪ್ಯಾರಿಸ್ಗೆ ವಾಪಸ್ ಬಂದು ಸ್ಪರ್ಧಿಸಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಕಳೆದ ವರ್ಷ ಅನಾರೋಗ್ಯದಿಂದಾಗಿ ಮೂರನೇ ಸುತ್ತಿನ ಪಂದ್ಯದಿಂದ ಹಿಂದೆ ಸರಿದಿದ್ದ ರೈಬಾಕಿನಾ ಹೇಳಿದ್ದಾರೆ.
ಕಝಕ್ನ ವಿಶ್ವದ ನಂ.4ನೇ ಆಟಗಾರ್ತಿ ಎಲೆನಾ ರೈಬಾಕಿನಾ ಈ ಋತುವಿನಲ್ಲಿ ಟೂರ್ನಮೆಂಟ್ನ ಫೇವರಿಟ್ ಇಗಾ ಸ್ವಿಯಾಟೆಕ್ರನ್ನು ಮಣಿಸಿದ ಏಕೈಕ ಆಟಗಾರ್ತಿಯಾಗಿದ್ದಾರೆ. ಎಪ್ರಿಲ್ನಲ್ಲಿ ನಡೆದ ಸ್ಟಟ್ಗರ್ಟ್ ಟೂರ್ನಿಯ ಸೆಮಿ ಫೈನಲ್ನಲ್ಲಿ ಈ ಸಾಧನೆ ಮಾಡಿದ್ದಾರೆ.