ಆ್ಯಷಸ್ ಸರಣಿಯಲ್ಲಿ ಇತಿಹಾಸ ಸೃಷ್ಟಿಸಿದ ಹ್ಯಾರಿ ಬ್ರೂಕ್

Update: 2023-07-10 08:08 GMT

ಫೋಟೋ: twitter.com/Harry_Brook_88

ಹೆಡಿಂಗ್ಲೆ: ಇಂಗ್ಲೆಂಡ್ ನ ಯುವ ಬ್ಯಾಟ್ಸ್ಮನ್ ಹ್ಯಾರಿ ಬ್ರೂಕ್ ರವಿವಾರ ಕೇವಲ 1058 ಎಸೆತಗಳಲ್ಲಿ 1000 ಟೆಸ್ಟ್ ರನ್ ಗಳನ್ನು ಪೂರೈಸಿ, ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಒಂದು ಸಾವಿರ ರನ್ ಗಳಿಸಿದ ದಾಖಲೆಗೆ ಪಾತ್ರರಾದರು.

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಆ್ಯಷಸ್ ಸರಣಿಯ ಮೂರನೇ ಟೆಸ್ಟ್ ನಲ್ಲಿ 24 ವರ್ಷ ವಯಸ್ಸಿನ ಬ್ರೂಕ್ ಈ ದಾಖಲೆ ಸೃಷ್ಟಿಸಿದರು. ಈ ಮೂಲಕ 1140 ಎಸೆತಗಳಲ್ಲಿ ಸಾವಿರ ರನ್ ಪೂರೈಸಿದ್ದ ನ್ಯೂಜಿಲೆಂಡ್ ನ ಕೊಲಿನ್ ಡೆ ಗ್ರ್ಯಾಂಡ್ಹೋಂ ದಾಖಲೆ ಅಳಿಸಿ ಹಾಕಿದರು. ಟಿಮ್ ಸೌಥಿ 1167 ಎಸೆತಗಳಲ್ಲಿ ಹಾಗೂ ಇಂಗ್ಲೆಂಡ್ ನ ಆರಂಭಿಕ ಆಟಗಾರ ಬೆನ್ ಡ್ಯುಕೆಟ್ 1168 ಎಸೆತಗಳಲ್ಲಿ ಈ ಮೈಲುಗಲ್ಲು ತಲುಪಿದ್ದರು. ಅತಿ ಕಡಿಮೆ ಇನಿಂಗ್ಸ್ ಗಳಲ್ಲಿ ಸಹಸ್ರ ರನ್ ದಾಖಲಿಸಿದ ಸಾಧಕರ ಪಟ್ಟಿಯಲ್ಲಿ ಬ್ರೂಕ್, ಹರ್ಬರ್ಟ್ ಸುಚ್ಲಿಫ್ ಹಾಗೂ ಇ.ಡಿ.ವೀಕ್ಸ್ ಜತೆಗೆ ಐದನೇ ಸ್ಥಾನದಲ್ಲಿದ್ದಾರೆ.

ಮೂರನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಮೂರು ವಿಕೆಟ್ ಗಳ ರೋಚಕ ಜಯ ಸಾಧಿಸಿದ ಇಂಗ್ಲೆಂಡ್ ಸರಣಿಯನ್ನು ಜೀವಂತ ಇರಿಸಿಕೊಂಡಿದೆ. ಹ್ಯಾರಿ ಬ್ರೂಕ್ ಹಾಗೂ ಕ್ರಿಸ್ ವೋಕ್ಸ್ 59 ರನ್ ಗಳ ಜತೆಯಾಟದಲ್ಲಿ ಪಾಲ್ಗೊಂಡರು. ಆಸ್ಟ್ರೇಲಿಯಾ ಈ ಸರಣಿಯಲ್ಲಿ 2-1 ಮುನ್ನಡೆಯಲ್ಲಿದೆ.

ನಾಲ್ಕನೇ ಪಂದ್ಯ ಓಲ್ಡ್ ಟ್ರಾಫರ್ಡ್ ನಲ್ಲಿ ಜುಲೈ 19ರಿಂದ ನಡೆಯಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿದಲ್ಲಿ 22 ವರ್ಷಗಳಲ್ಲಿ ಮೊದಲ ಬಾರಿಗೆ ಆ್ಯಷಸ್ ಆಸ್ಟ್ರೇಲಿಯಾ ಪಾಲಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News