ಏಶ್ಯನ್ ಗೇಮ್ಸ್ ಗೆ ಪೂರ್ವಭಾವಿಯಾಗಿ ಹಾಕಿ ಕೋಚಿಂಗ್ ಶಿಬಿರ; 39 ಸಂಭಾವ್ಯ ಪುರುಷ ಆಟಗಾರರ ಆಯ್ಕೆ
ಹೊಸದಿಲ್ಲಿ: ಚೀನಾದ ಹಂಗ್ಝೂನಲ್ಲಿ ನಡೆಯಲಿರುವ ಏಶ್ಯನ್ ಗೇಮ್ಸ್ ಗೆ ಪೂರ್ವಭಾವಿಯಾಗಿ, ರಾಷ್ಟ್ರೀಯ ಕೋಚಿಂಗ್ ಶಿಬಿರಕ್ಕೆ ಹಾಕಿ ಇಂಡಿಯಾ ರವಿವಾರ 39 ಪುರುಷ ಆಟಗಾರರ ಹೆಸರುಗಳನ್ನು ಪ್ರಕಟಿಸಿದೆ.
ಶಿಬಿರವು ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ ಕೇಂದ್ರದಲ್ಲಿ ಆಗಸ್ಟ್ 21ರಿಂದ ಸೆಪ್ಟಂಬರ್ 18ರವರೆಗೆ ನಡೆಯಲಿದೆ. ತಮ್ಮ ನೈಪುಣ್ಯವನ್ನು ಹೆಚ್ಚಿಸಿಕೊಳ್ಳಲು ಶಿಬಿರವು ಆಟಗಾರರಿಗೆ ಸಹಾಯ ಮಾಡಲಿದೆ.
ಏಶ್ಯನ್ ಗೇಮ್ಸ್ ಸೆಪ್ಟಂಬರ್ 23ರಿಂದ ಅಕ್ಟೋಬರ್ 8ರವರೆಗೆ ನಡೆಯಲಿದೆ.
ಈ ತಿಂಗಳ ಮೊದಲಲ್ಲಿ, ಚೆನ್ನೈಯಲ್ಲಿ ದಾಖಲೆಯ ನಾಲ್ಕನೇ ಬಾರಿಗೆ ಏಶ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ಭಾರತೀಯ ಪುರುಷರ ಹಾಕಿ ತಂಡವು ತನ್ನ ಏಶ್ಯನ್ ಗೇಮ್ಸ್ ಅಭಿಯಾನವನ್ನು ಸೆಪ್ಟಂಬರ್ 24ರಂದು ಉಝ್ಬೆಕಿಸ್ತಾನ್ ವಿರುದ್ಧದ ಪಂದ್ಯದೊಂದಿಗೆ ಆರಂಭಿಸಲಿದೆ.
ಏಶ್ಯನ್ ಗೇಮ್ಸ್‍ನಲ್ಲಿ ಭಾರತವು ‘ಎ’ ಗುಂಪಿನಲ್ಲಿದೆ. ಪಾಕಿಸ್ತಾನ, ಜಪಾನ್, ಬಾಂಗ್ಲಾದೇಶ, ಸಿಂಗಾಪುರ ಮತ್ತು ಉಝ್ಬೆಕಿಸ್ತಾನ ಈ ಗುಂಪಿನಲ್ಲಿರುವ ಇತರ ತಂಡಗಳು.
ಸಂಭಾವ್ಯ 39 ಸದಸ್ಯರ ಗುಂಪು
ಗೋಲ್‍ಕೀಪರ್‍ಗಳು: ಕೃಷನ್ ಬಹಾದುರ್ ಪಾಠಕ್, ಪಿ.ಆರ್. ಸ್ರೀಜೇಶ್, ಸೂರಜ್ ಕರ್ಕೇರ, ಪವನ್, ಪ್ರಶಾಂತ್ ಕುಮಾರ್ ಚೌಹಾಣ್.
ಡಿಫೆಂಡರ್‍ಗಳು: ಜರ್ಮನ್‍ಪ್ರೀತ್ ಸಿಂಗ್, ಸುರೇಂದರ್ ಕುಮಾರ್, ಹರ್ಮನ್‍ಪ್ರೀತ್ ಸಿಂಗ್, ವರುಣ್ ಕುಮಾರ್, ಅಮಿತ್ ರೋಹಿದಾಸ್, ಗುರಿಂದರ್ ಸಿಂಗ್, ಜುಗ್ರಾಜ್ ಸಿಂಗ್, ಮನ್‍ದೀಪ್ ಮೋರ್, ನೀಲಮ್ ಸಂಜೀಪ್ ಕ್ಸೆಸ್, ಸಂಜಯ್, ಯಶ್‍ದೀಪ್ ಸಿವಚ್, ದಿಪ್ಸನ್ ತಿರ್ಕೆ ಮತ್ತು ಮಂಜೀತ್.
ಮಿಡ್‍ಫೀಲ್ಡರ್‍ಗಳು: ಮನ್‍ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಮೊಯಿರಂಗ್ತೆಮ್ ರವಿಚಂದ್ರ ಸಿಂಗ್, ಶಂಶೇರ್ ಸಿಂಗ್, ನೀಲಕಂಠ ಶರ್ಮ, ರಾಜ್‍ಕುಮಾರ್ ಪಾಲ್, ಸುಮಿತ್, ಆಕಾಶ್‍ದೀಪ್ ಸಿಂಗ್, ಗುರ್ಜಂತ್ ಸಿಂಗ್, ಮುಹಮ್ಮದ್ ರಹೀಲ್ ಮೌಸೀನ್ ಮತ್ತು ಮಣಿಂದರ್ ಸಿಂಗ್.
ಫಾರ್ವರ್ಡ್‍ಗಳು: ಎಸ್. ಕಾರ್ತಿ, ಮನ್‍ದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಅಭಿಶೇಕ್, ದಿಲ್‍ಪ್ರೀತ್ ಸಿಂಗ್, ಸುಖ್‍ಜೀತ್ ಸಿಂಗ್, ಸಿಮ್ರಾನ್‍ಜೀತ್ ಸಿಂಗ್, ಶಿಲಾನಂದ ಲಾಕ್ರ ಮತ್ತು ಪವನ್ ರಾಜ್‍ಭರ್.